Home ಸುದ್ದಿಗಳು ಮನೆಯ ಬೀಗ ಮುರಿದು ಲಕ್ಷಾಂತರ ರೂ ಚಿನ್ನಾಭರಣ ದೋಚಿದ ಕಳ್ಳರು

ಮನೆಯ ಬೀಗ ಮುರಿದು ಲಕ್ಷಾಂತರ ರೂ ಚಿನ್ನಾಭರಣ ದೋಚಿದ ಕಳ್ಳರು

stole millions of rupees worth of gold jewellery

ಕಾಪು: ಮನೆಯ ಬೀಗ ಮುರಿದು ಲಕ್ಷಾಂತರ ರೂ ಚಿನ್ನಾಭರಣ ಸಹಿತ ನಗದು ದೋಚಿ ಪರಾರಿಯಾಗಿರುವ ಘಟನೆ ಉದ್ಯಾವರ ಗುಡ್ಡೆಯಂಗಡಿಯಲ್ಲಿ ನಡೆದಿದೆ.

ಕಳ್ಳರು ಮನೆಯೊಳಗೆ ನುಗ್ಗಿ 116 ಪವನ್ ತೂಕದ ಚಿನ್ನಾಭರಣ, 100 ಗ್ರಾಂ ಬೆಳ್ಳಿ ಸಹಿತ, 30 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ. ಉದ್ಯಾವರದ ರೇಷ್ಮಾ ತಮ್ಮ ಮಗಳೊಂದಿಗೆ ಪತಿ ಮನೆಗೆ ತೆರಳಿದ್ದು, ವಾಪಸ್ಸು ಬಂದು ನೋಡಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ.

ರೇಷ್ಮಾ ಅವರು ಕಳೆದ 15 ವರ್ಷಗಳಿಂದ ಉದ್ಯಾವರ ಗ್ರಾಮದ ಗುಡ್ಡೆಯಂಗಡಿಯಲ್ಲಿರುವ ಚಂದ್ರಕಾಂತ್ ಅವರ ಮನೆಯ ಮೊದಲ ಮಹಡಿಯಲ್ಲಿ ಬಾಡಿಗೆಗೆ ವಾಸ ಮಾಡಿಕೊಂಡಿದ್ದು, ಮನೆಯ ನೆಲಮಹಡಿಯಲ್ಲಿ ಮನೆಯ ಮಾಲೀಕರು ವಾಸಿಸುತ್ತಿದ್ದರು.

ಮನೆ ಮಾಲೀಕರು ಜ. 14ರಂದು ಮುಂಬಯಿಗೆ ತೆರಳಿದ್ದರು. ರೇಷ್ಮಾ ಅವರು ಮಗಳೊಂದಿಗೆ ಜ. 25ರಂದು ಪರ್ಕಳದಲ್ಲಿರುವ ಗಂಡನ ಮನೆಗೆ ಹೋಗಿದ್ದರು. ಬಳಿಕ ಜ. 29ರಂದು ಉದ್ಯಾವರದ ಮನೆಗೆ ಹಿಂದಿರುಗಿದಾಗ ಮನೆಯ ಮುಖ್ಯ ಬಾಗಿಲು ತೆರೆದಿದ್ದು, ಒಳಗೆ ಹೋಗಿ ನೋಡಿದಾಗ ಕಳ್ಳತವಾಗಿರುವುದು ಬೆಳಕಿಗೆ ಬಂದಿದೆ.

ಮಲಗುವ ಕೋಣೆಯಲ್ಲಿದ್ದ 3 ಕಪಾಟುಗಳು ತೆರೆದಿದ್ದವು. ಈ ವೇಳೆ ಅದರೊಳಗಿದ್ದ 116 ಪವನ್ ಚಿನ್ನದ ಆಭರಣಗಳು, 100 ಗ್ರಾಂನಷ್ಟು ಬೆಳ್ಳಿಯ ದೇವರ ಸಾಮಗ್ರಿಗಳು ಹಾಗೂ 30 ಸಾವಿರ ರೂಪಾಯಿ ಕಳವಾಗಿದೆ.

ಜ. 25ರಿಂದ ಜ. 29ರ ಆಸುಪಾಸಿನಲ್ಲಿ ಈ ಕಳ್ಳತನ ಕೃತ್ಯ ನಡೆದಿದೆ. ರೇಷ್ಮಾ ನೀಡಿರುವ ದೂರು ದಾಖಲಿಸಿದ್ದಾರೆ. ಅವರ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
Previous articleಕಾಶಿಬೆಟ್ಟು: ಚಲಿಸುತ್ತಿರುವಾಗಲೇ ಟಯರ್ ಕಳಚಿ ನಿಂತ ಕೆಎಸ್‌ಆರ್‌ಟಿಸಿ ಬಸ್
Next articleಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಬಾಲಿಶ: ವಿಶ್ವಪ್ರಸನ್ನ ಶ್ರೀ