
ತುಮಕೂರು: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೆರೆಗಳಪಾಳ್ಯ ಹಾಗೂ ಕಾಟಗಾನಹಟ್ಟಿ ಬಳಿ ಭೀಕರ ಕಾರು ಅಪಘಾತ ನಡೆದಿದೆ.
ತುಮಕೂರು ಕಡೆಯಿಂದ ಬರುತ್ತಿದ್ದ ಸಿಯಾಜ್ ಮಾರುತಿ ಕಾರು ಹಾಗೂ ಮಧುಗಿರಿ ಕಡೆಯಿಂದ ತುಮಕೂರು ಕಡೆಗೆ ಹೊರಟಿದ್ದ ಟಾಟಾ ಟಿಯಾಗೋ ಕಾರಿನ ನಡುವೆ ಅಫಘಾತ ಸಂಭವಿಸಿದೆ. ಎರಡು ಕಾರಿನಲ್ಲಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ.
ಈ ಅಪಘಾತದಲ್ಲಿ ಮೃತಪಟ್ಟವರನ್ನು ಮಾರುತಿ ಸಿಯಾಜ್‌ಕಾರ್‌ನಲ್ಲಿದ್ದ 33 ವರ್ಷದ ಸಿಂಧೂ ಅವರ ಪುತ್ರ 12 ವರ್ಷದ ವೇದಾಸ್ ರೆಡ್ಡಿ, 30 ವರ್ಷದ ಆನಂದ್, 60 ವರ್ಷದ ಜನಾರ್ದನ ರೆಡ್ಡಿ ಸಾವನಪ್ಪಿದ್ದಾರೆ. ಇನ್ನು ಟಿಯಾಗೋ ಕಾರಿನಲ್ಲಿದ ಪಿಗ್ಮಿ ಕಲೆಕ್ಟರ್ ನಾಗರಾಜ್ ಮತ್ತು ಸಿದ್ಧಗಂಗಾ ಎಂದು ಗುರುತಿಸಲಾಗಿದೆ.
ಉಳಿದಂತೆ ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಗಣೇಶ ಹಬ್ಬ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ.
