Home ಸುದ್ದಿಗಳು ಸಲೂನ್ ಮೇಲೆ ದಾಳಿ ನಡೆಸಿದ ಪ್ರಕರಣ: ಬಂಧಿತರಿಗೆ ಫೆ. 7ರವರೆಗೆ ನ್ಯಾಯಾಂಗ ಬಂಧನ

ಸಲೂನ್ ಮೇಲೆ ದಾಳಿ ನಡೆಸಿದ ಪ್ರಕರಣ: ಬಂಧಿತರಿಗೆ ಫೆ. 7ರವರೆಗೆ ನ್ಯಾಯಾಂಗ ಬಂಧನ

The case of attack on saloon: Arrested on Feb. Judicial custody till 7

ಮಂಗಳೂರು: ಯುನಿಸೆಕ್ಸ್ ಸಲೂನ್ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ 14 ಮಂದಿಗೆ ಫೆಬ್ರವರಿ 7ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಸೆಲೂನ್‌ನಲ್ಲಿ ಅನೈತಿಕ ದಂಧೆ ನಡೆಯುತ್ತಿದೆ ಎಂದು ಆರೋಪಿಸಿ ರಾಮಸೇನೆ ಕಾರ್ಯಕರ್ತರು ನಗರ ಗುರುವಾರ ಮಧ್ಯಾಹ್ನ ವೇಳೆ ದಾಳಿ ನಡೆಸಿ, ಸೆಲೂನ್‌ನಲ್ಲಿದ್ದ ಪೀಠೋಪಕರಣಗಳು ಮತ್ತು ಗಾಜುಗಳನ್ನು ಒಡೆದು ಹಾಕಿ ಹಾನಿಗೈದಿದ್ದರು.

12 ಕ್ಕೂ ಹೆಚ್ಚು ಜನರ ಗುಂಪು ಸಲೂನ್‌ನಲ್ಲಿ ಎಲ್ಲವನ್ನೂ ನಾಶಪಡಿಸಿದೆ. ಮಹಿಳಾ ಸಿಬ್ಬಂದಿ ಹಾಗೂ ಇತರರಿಗೆ ಬೆದರಿಕೆ ಹಾಕಿದ್ದರು ಎಂದು ವರದಿಯಾಗಿದೆ.

ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ ಕೂಡಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿ 14 ಮಂದಿಯನ್ನು ಬಂಧಿಸಿದ್ದರು.

 
Previous articleಅಮುಲ್ ಹಾಲಿನ ಬೆಲೆ ಲೀಟರ್‌ಗೆ 1 ರೂ. ಕಡಿತ ಘೋಷಿಸಿದ GCMMF
Next articleಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 11ರ ಮಾಜಿ ಸ್ಪರ್ಧಿ ಜಗದೀಶ್ ಬಂಧನ