
ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಬಹಳಷ್ಟು ಸದ್ದು ಮಾಡುತ್ತಿದೆ. ಹೌದು, ಎರಡು ಸಾವಿರ ಹಣ, ಫ್ರಿ ಬಸ್, ಅನ್ನಭಾಗ್ಯ ಹಣ, ಉಚಿತ ಕರೆಂಟ್, ಯುವನಿಧಿ ಸ್ಕೀಮ್ ಇತ್ಯಾದಿ. ಇದೀಗ ಇದನ್ನೆಲ್ಲಾ ಪಡೆಯುವ ಜನಸಾಮಾನ್ಯರಿಗೆ ಗ್ಯಾರಂಟಿ ಪರಿಣಾಮ ಭೀತಿ ಉಂಟು ಮಾಡಿದೆ. ಹೌದು, ಲೋಕಸಭಾ ಚುನಾವಣೆಯ ಫಲಿತಾಂಶದ ನಂತರವೇ ರಾಜ್ಯ ಸರ್ಕಾರವು ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆ ಹೆಚ್ಚು ಮಾಡಿ ಜನಸಾಮಾನ್ಯರಿಗೆ ಶಾಕ್ ನೀಡಿತ್ತು. ಇದೀಗ ತರಕಾರಿ ಬೆಲೆಯೂ ಹೆಚ್ಚಳವಾಗಿದೆ.
ಇದೀಗ ಪಂಚ ಗ್ಯಾರಂಟಿ ಯೋಜನೆಗೆ ಸರ್ಕಾರವು ಹಣ ಹೊಂದಿಸಲು ಪರದಾಡುತ್ತಿದೆ ಎಂದು ಬಹಳಷ್ಟು ಚರ್ಚೆಯಾಗ್ತಾ ಇದೆ. ಗ್ಯಾರಂಟಿ ವೆಚ್ಚದ ಹೊರೆಯನ್ನು ಸಾಮಾನ್ಯ ಜನರ ಹೆಗಲ ಮೇಲೆ ಹೊರಿಸುವ ಪ್ರಯತ್ನಕ್ಕೆ ಸರ್ಕಾರ ಹಿಂದೆಯೇ ಮೊರೆ ಹೋಗಿತ್ತು. ಇಂದು ಇತರ ಪಕ್ಷದ ನಾಯಕರು ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಈಗಾಗಲೇ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ದರವು ತಲಾ 3 ರೂ. ಹೆಚ್ಚಳ ಮಾಡಿದ್ದು ತಿಳಿದೆ ಇದೆ. ಇದೀಗ ದಿಡೀರ್ ದರ ಏರಿಕೆಯಿಂದ ವಾಹನ ಸವಾರರಿಗೆ ಬಿಗ್ ಶಾಕ್ ಕೊಟ್ಟಂತಾಗಿದೆ. ಇತ್ತ ದರ ಏರಿಕೆ ವಿರುದ್ಧ ಜನ ಸಾಮಾನ್ಯರು ಕಿಡಿಕಾರಿದ್ದಾರೆ. ಈ ರೀತಿ ದರ ಜಾಸ್ತಿ ಮಾಡ್ತಿದ್ರೆ ಜನರಿಗೆ ಕಷ್ಟ ಆಗುತ್ತೆ, ಫ್ರೀ ಬಸ್ ಕೊಡ್ತೀವೆ ಅಂತಾರೆ, ಡಿಸೇಲ್ನಲ್ಲಿ ತಗೋತಿದ್ದಾರೆ ಅಂತ ಜನಸಾಮಾನ್ಯರು ಗರಂ ಆಗಿದ್ದಾರೆ.
ತಿಂಗಳ ಹಿಂದೆ ಬೆಳೆಗೆ ನೀರಿನ ಅಭಾವ, ವಿಪರೀತ ಬಿಸಿಲಿನಿಂದ ಕಂಗೆಟ್ಟ ಪರಿಣಾಮ ಇಳುವರಿ ಇಲ್ಲದೆ ತರಕಾರಿಗಳ ದರ ಏರಿಕೆಯಾಗಿತ್ತು. ಆದರೆ, ಈಗ ಸರಕು ಸಾಗಣೆ ವೆಚ್ಚ ಹೆಚ್ಚಳ ಆಗುತ್ತಿರುವ ಕಾರಣ ತರಕಾರಿ ಬೆಲೆ ಇನ್ನಷ್ಟು ದುಬಾರಿಯಾಗಿದೆ. ಒಟ್ಟಾರೆ ತೈಲ ಬೆಲೆ ಏರಿಕೆಯಾದ ಬೆನ್ನಲ್ಲೇ ತರಕಾರಿ ದರ ಏರಿಕೆ ಯಾಗಿರುವುದು ಜನರಿಗೆ ತೊಂದರೆ ಉಂಟು ಮಾಡಿದೆ.
ತರಕಾರಿ ಬೆಲೆ ಇಂತಿದೆ
ಟೊಮೆಟೋ ₹103
ಬೀನ್ಸ್ ₹224
ಬಿಳಿ ಬದನೆ ₹100
ಬಜ್ಜಿ ಮೆಣಸಿನಕಾಯಿ ₹98
ಕ್ಯಾಪ್ಸಿಕಂ ₹116
ಮೂಲಂಗಿ ₹70
ನುಗ್ಗೇಕಾಯಿ ₹185
ಹೀರೇಕಾಯಿ ₹100
ಶುಂಠಿ ₹198
ಬೆಳ್ಳುಳ್ಳಿ ₹340
ಕೊತ್ತಂಬರಿ ₹20-30
