Home ಸುದ್ದಿಗಳು ಬ್ಯಾಗ್‌ನಲ್ಲಿದ್ದ 10.08 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ: ಪ್ರಕರಣ ದಾಖಲು

ಬ್ಯಾಗ್‌ನಲ್ಲಿದ್ದ 10.08 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ: ಪ್ರಕರಣ ದಾಖಲು

Theft of gold jewelery worth Rs 10.08 lakh

ಬಂಟ್ವಾಳ: ಪ್ರಯಾಣಿಕರೊಬ್ಬರ ಬ್ಯಾಗ್‌ನಲ್ಲಿದ್ದ 10.08 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 3000 ರೂಪಾಯಿ ನಗದು ಕಳ್ಳತನವಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಏನು: ಬೆಂಗಳೂರಿನ ಯಲಹಂಕ ನ್ಯೂ ಟೌನ್ ನಿವಾಸಿ 68 ವರ್ಷದ ರಾಜಗೋಪಾಲ್ ಕಾರಂತ್ ಎಂಬವರು ನೀಡಿದ ದೂರಿನ ಪ್ರಕಾರ, ಅವರು ತಮ್ಮ ಪತ್ನಿಯ ತವರು ಮನೆಯಾದ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆ ಮಾಡ್‌ಗೆ ಖಾಸಗಿ ಕುಟುಂಬದ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು.

ಫೆಬ್ರವರಿ 1 ರಂದು ರಾತ್ರಿ ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಕೆಎಸ್‌ಆರ್‌ಟಿಸಿ ಬಸ್‌ಗೆ ಪತ್ನಿ ಮತ್ತು ಅಳಿಯನೊಂದಿಗೆ ಮನೆಯಿಂದ ಚಿನ್ನವನ್ನು ಬಾಕ್ಸನಲ್ಲಿ ಇಟ್ಟುಕೊಂಡು ಅದರ ಜೊತೆಯಲ್ಲಿ 3000 ರೂ ಹಣವನ್ನು ತಮ್ಮ ಲಗೇಜು ಬ್ಯಾಗ್ ನಲ್ಲಿರಿಸಿ ಹೊರಟಿದ್ದಾರೆ.

ಪ್ರಯಾಣದ ವೇಳೆ, ಕುಣಿಗಲ್ ಬಳಿ ಬಸ್ ನಿಂತಾಗ, ಅವರ ಹೆಂಡತಿ ಮತ್ತು ಅಳಿಯ ಸದ್ರಿ ಚಿನ್ನಾಭರಣ ಹಾಗೂ ನಗದು ಹಣವಿದ್ದ ಬ್ಯಾಗುಗಳನ್ನು ಬಸ್ಸಿನಲ್ಲಿಯೇ ಇಟ್ಟು ಶೌಚಾಲಯಕ್ಕೆ ಹೋಗಿದ್ದರೆ. ಫೆಬ್ರವರಿ 2 ರಂದು ಕಾರಿಂಜಾ ಕ್ರಾಸ್ ತಲುಪಿದಾಗ, ಅವರು ತಮ್ಮ ಬ್ಯಾಗ್ ತೆರೆದಾಗ 144 ಗ್ರಾಂ ಚಿನ್ನ ಮತ್ತು ನಗದು ನಾಪತ್ತೆಯಾಗಿರುವುದು ತಿಳಿದು ಬಂದಿದೆ.

ರಾಜಗೋಪಾಲ್ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಐಪಿಸಿ ಕಲಂ 303(2) ಮತ್ತು 305(ಬಿ) (ಬಿಎನ್‌ಎಸ್) ಅಡಿಯಲ್ಲಿ ಪ್ರಕರಣ ಸಂಖ್ಯೆ 09/ ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 
Previous articleಡಿಜಿಟಲ್ ಅರೆಸ್ಟ್ ಮಾಡಿರುವುದಾಗಿ ಬೆದರಿಸಿ 89‌ ಲಕ್ಷ ರೂ. ವಂಚನೆ ಪ್ರಕರಣ: ಆರೋಪಿಯ ಬಂಧನ
Next articleನವದೆಹಲಿ: ಆರ್​ಬಿಐನಿಂದ 25 ಮೂಲಾಂಕಗಳಷ್ಟು ಬಡ್ಡಿದರ ಕಡಿತದ ನಿರೀಕ್ಷೆ