Home ಸುದ್ದಿಗಳು ರಾಜ್ಯ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಸರ್ಕಾರದ ಈ 6 ಷರತ್ತು ಪಾಲಿಸಲೇಬೇಕು

ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಸರ್ಕಾರದ ಈ 6 ಷರತ್ತು ಪಾಲಿಸಲೇಬೇಕು

0
ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಸರ್ಕಾರದ ಈ 6 ಷರತ್ತು ಪಾಲಿಸಲೇಬೇಕು

ಇಂದು ರೇಷನ್ ಕಾರ್ಡ್ ಎಂಬುದು ಪ್ರತಿಯೊಬ್ಬರಿಗೂ ಅಗತ್ಯ ವಾಗಿ ಬೇಕಾಗಿದೆ.‌ ಹೌದು ಈ ರೇಷನ್ ಕಾರ್ಡ್ ಮೂಲಕ ಇಂದು ಅನೇಕ‌ ಸೌಲಭ್ಯ ಗಳನ್ನು‌ ಜನರು ಪಡೆಯುತ್ತಿದ್ದಾರೆ. ಆದರೆ ಇಂದು ಕಾರ್ಡ್ ದುರುಪಯೋಗ ಮಾಡಿಕೊಂಡಿರುವವರ ಸಂಖ್ಯೆ ಕೂಡ‌ ಬಹಳಷ್ಟು ಹೆಚ್ಚಾಗಿದ್ದು, ಆಹಾರ ಇಲಾಖೆಯು ಬಿಪಿಎಲ್ ಕಾರ್ಡ್ ಪಡೆಯಲು ಈ ಷರತ್ತು ನಿಗದಿ ಮಾಡಿದೆ.

ಇವರು ಬಿಪಿಎಲ್ ಕಾರ್ಡ್ ಪಡೆಯುವಂತಿಲ್ಲ
*3 ಎಕರೆಗಿಂತ ಹೆಚ್ಚಿನ ಭೂ ಆಸ್ತಿ ಹೊಂದಿದ್ದರೆ ಅಂತವರಿಗೆ ಬಿಪಿಎಲ್ ರೇಷನ್ ಕಾರ್ಡ್ ಇಲ್ಲ.

*ಅದೇ ರೀತಿ ಸರ್ಕಾರಿ ಉದ್ಯೋಗಸ್ಥರಾಗಿದ್ದರೆ ಬಿಪಿಎಲ್ ರೇಷನ್ ಕಾರ್ಡ್ ಸಿಗಲಾರದು ಎಂದು ಹೇಳಬಹುದು.

*ಹಾಗೆಯೇ ತೆರಿಗೆ ಪಾವತಿ ಮಾಡುತ್ತಿದ್ದರೆ ಆಗ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಸಾಧ್ಯ ‌ಇಲ್ಲ.

*ವೈಟ್ ಬೋರ್ಡ್ ಅಂದರೆ ಖಾಸಗಿ ವೈಯಕ್ತಿಕ ವಾಹನ ಹೊಂದಿದ್ದರೆ ಅಂತವರಿಗೆ ಬಿಪಿಎಲ್ ರೇಷನ್ ಕಾರ್ಡ್ ಇಲ್ಲ

*ಇನ್ನು ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದಾದರೆ ವಾರ್ಷಿಕ ಆದಾಯ 1.2 ಲಕ್ಷ ಆದಾಯ ಮೀರಿರಬಾರದು.

ಇಂತವರ ಕಾರ್ಡ್ ರದ್ದು
ಇದೀಗ ಬಿಪಿಎಲ್ ಕಾರ್ಡ್ ಪಡೆಯಲು ಸುಳ್ಳು ದಾಖಲೆ ನೀಡಿ ಅರ್ಜಿ ಸಲ್ಲಿಸಿದ ಪ್ರಕರಣ ಹೆಚ್ಚಾಗಿ ಕಂಡು ಬಂದಿದೆ. ಹೌದು 3,17,441 ಬಿಪಿಎಲ್‌ ಪಡಿತರ ಚೀಟಿಗಳನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ರದ್ದು ಮಾಡಿದ್ದು ಹಾಗೆಯೇ ಅನರ್ಹರಿಂದ ಈಗಾಗಲೇ 11. 91 ಕೋಟಿ ರೂ. ದಂಡವನ್ನೂ ವಸೂಲಿ ಕೂಡ ಮಾಡಿದೆ.

ಕೇವಲ ಸರ್ಕಾರಿ ಸೌಲಭ್ಯಗಳು, ಆರೋಗ್ಯ ಸಂಬಂಧಿ ಶಸ್ತ್ರಚಿಕಿತ್ಸೆ ಉದ್ದೇಶಕ್ಕಾಗಿಯೇ ಹೆಚ್ಚಿನ ಮಂದಿ ಬಿಪಿಎಲ್‌ ಕಾರ್ಡ್‌ ಪಡೆದಿದ್ದಾರೆ. ಅಂಥವರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಕೊಡುವ ರೇಷನ್‌ ಬೇಕಿಲ್ಲ. ಇದೀಗ ಆರು ತಿಂಗಳಿಂದ ಪಡಿತರ ಪಡೆಯದ 3 ಲಕ್ಷದ 26 ಸಾವಿರ ರೇಷನ್‌ ಕಾರ್ಡ್‌ಗಳನ್ನು ಅಮಾನತಿಗೆ ಸರ್ಕಾರ ಕ್ರಮ ಕೈಗೊಂಡಿದೆ.

ಅದೇ ರೀತಿ ಹೆಚ್ಚಿನ ಆದಾಯ, ಸರ್ಕಾರಿ ಕೆಲಸ ಇದ್ದರೂ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವ ಮಾಹಿತಿ ಆಹಾರ ಇಲಾಖೆಗೆ ಸಿಕ್ಕಿದ್ದು ಇಂತವರ ಕಾರ್ಡ್ ರದ್ದು ಆಗಲಿದೆ. ಇಂದು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಲು ಕೂಡ ಅವಕಾಶ ನೀಡಿದ್ದು, ನಿಗದಿ ಪಡಿಸಿದಕ್ಕಿಂತ ಹೆಚ್ಚಿನ ಆದಾಯ ಹೊಂದಿದವರು, ಕೂಡ ಬಿಪಿಎಲ್ ಕಾರ್ಡ್ ಗೆ ಅರ್ಜಿ ಹಾಕಿದ್ದಾರೆ. ಹಾಗಾಗಿ ಈ ಬಗ್ಗೆ ಆಹಾರ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ.

 

LEAVE A REPLY

Please enter your comment!
Please enter your name here