Home ಸುದ್ದಿಗಳು ಸುಳ್ಯ: ಮಹಿಳೆ ಶೌಚಾಲಯದಲ್ಲಿದ್ದ ವೇಳೆ ಫೋಟೋ ತೆಗೆದ ಕಿಡಿಗೇಡಿ

ಸುಳ್ಯ: ಮಹಿಳೆ ಶೌಚಾಲಯದಲ್ಲಿದ್ದ ವೇಳೆ ಫೋಟೋ ತೆಗೆದ ಕಿಡಿಗೇಡಿ

0
ಸುಳ್ಯ: ಮಹಿಳೆ ಶೌಚಾಲಯದಲ್ಲಿದ್ದ ವೇಳೆ ಫೋಟೋ ತೆಗೆದ ಕಿಡಿಗೇಡಿ

ಸುಳ್ಯ: ಮಹಿಳೆಯೋರ್ವರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಶೌಚಾಲಯದಲ್ಲಿದ್ದ ವೇಳೆ ಕಿಡಿಗೇಡಿಯೊಬ್ಬ ಶೌಚಾಲಯದ ಕಿಟಕಿಯಿಂದ ಫೋಟೋ ತೆಗೆದ ಘಟನೆ ಸುಳ್ಯದಲ್ಲಿ ನಡೆದಿದೆ.

ಸುಳ್ಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಶೌಚಾಲಯಕ್ಕೆ ಮಹಿಳೆ ಹೋಗಿದ್ದಾಗ ಹಿಂಬದಿಯಲ್ಲಿರುವ ಕಿಟಕಿಯ ಮೂಲಕ ಫೋಟೋ ತೆಗೆದಿರುವುದಾಗಿ ಮಹಿಳೆ ಆರೋಪಿಸಿದ್ದಾರೆ.

ಶೌಚಾಲಯದ ಕಿಟಕಿಯ ಗ್ಲಾಸ್‌ ಸರಿದಿದ್ದು ಸರಿದ ಭಾಗದಿಂದ ಫೋಟೋವನ್ನು ಕಿಡಿಗೇಡಿ ಕ್ಲಿಕ್ಕಿಸಿದ್ದಾನೆ. ಮಹಿಳೆ ಈ ಘಟನೆಯನ್ನು ಮತ್ತು ಆತನ ಕೈಯನ್ನು ನೋಡಿದ್ದು, ಮಹಿಳೆ ಜೋರಾಗಿ ಕಿರುಚಿಕೊಂಡಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ.

ಘಟನೆ ಬಗ್ಗೆ ಮಹಿಳೆ ಸುಳ್ಯ ಠಾಣೆಗೆ ಹಾಗೂ ಬಸ್‌ ನಿಲ್ದಾಣ ಅ ಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲೆ ನಡೆಸಿದ್ದಾರೆ. ಬಸ್‌ ನಿಲ್ದಾಣದ ಸಿಬ್ಬಂದಿಯನ್ನು ಠಾಣೆಗೆ ಕರೆಸಿ ಅಲ್ಲಿನ ಅವ್ಯವಸ್ಥೆ ಸರಿಪಡಿಸಲು ಸೂಚಿಸಿದ್ದಾರೆ.

 

LEAVE A REPLY

Please enter your comment!
Please enter your name here