
ಹಾವೇರಿ: ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದು ಟಿಟಿ ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ.
ಮೃತರನ್ನು ಶಿವಮೊಗ್ಗ ಮೂಲದವರು ಎಂದು ಹೇಳಲಾಗಿದೆ. ಮೃತರನ್ನು ಪರಶುರರಾಮ್ (45 ವರ್ಷ), ಭಾಗ್ಯ (40 ವರ್ಷ), ನಾಗೇಶ್ (50 ವರ್ಷ), ವಿಶಾಲಾಕ್ಷಿ (40 ವರ್ಷ), ಅರ್ಪಿತಾ (18 ವರ್ಷ), ಸುಭದ್ರಾಬಾಯಿ (65 ವರ್ಷ), (ಪುಣ್ಯ 50 ವರ್ಷ), ಮಂಜುಳುಬಾಯಿ (62 ವರ್ಷ), ಆದರ್ಶ (23 ವರ್ಷ), ಮಾನಸ (24 ವರ್ಷ), ರೂಪಾ (40 ವರ್ಷ), ಮಂಜುಳಾ (50 ವರ್ಷ) ಆಗಿದ್ದು, ಇನ್ನೊಬ್ಬರ ಹೆಸರು ತಿಳಿದು ಬಂದಿಲ್ಲ. ಇನ್ನು, ಘಟನೆಯಲ್ಲಿ ಓರ್ವ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆತನಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎನ್ನಲಾಗಿದೆ.
ಚಿಂಚೊಳ್ಳಿ ದೇವರ ದರ್ಶನ ಮುಗಿಸಿ ಮನೆಗೆ ವಾಪಸ್ ಆಗುವಾಗ ಈ ದುರ್ಘಟನೆ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಟಿಟಿ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
