Home ಸುದ್ದಿಗಳು ಉಡುಪಿ: ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ ಮೂವರ ಬಂಧನ

ಉಡುಪಿ: ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ ಮೂವರ ಬಂಧನ

Case of sexual harassment of girl: Arrest of homeless man

ಉಡುಪಿ: ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ ಘಟನೆ ಬ್ರಹ್ಮಾವರ ತಾಲೂಕಿನ ವಂಡಾರು ಬಳಿ ನಡೆದಿದೆ.

ಬಂಧಿತರನ್ನು ಭಟ್ಕಳ ಮುಂಡಳ್ಳಿಯ ಮೊಹಮ್ಮದ್ ಅಶ್ರಫ್ ಯಾನೆ ಮಾವಿಯ (23), ಶಿರೂರು ಮೂಲದವರಾದ ವಾಸೀಂ ಅಕ್ರಂ (34), ಅಲಿ ಬಾಪು ಯಾಸಿನ್ (36) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ ಒಂದು ಬಂದೂಕು, 11 ಕಾಡತೂಸು 4 ಹರಿತವಾದ ಚಾಕುಗಳು, ಒಂದು ಮಾಂಸ ಮಾಡಲು ಉಪಯೋಗಿಸುವ ಮಚ್ಚು, ಟಾರ್ಚ್ ಹಾಗೂ ಮೂರು ಮೊಬೈಲ್ ಫೋನ್ ಸಹಿತ ಆರೋಪಿಗಳು ಬಳಸಿದ್ದ ಆಟೋರಿಕ್ಷಾ ವಶಕ್ಕೆ ಪಡೆಯಲಾಗಿದೆ.

 
Previous articleಫೈನಾನ್ಸ್ ಸಾಲ ರಿಕವರಿ ಟೀಂ ಹೆಸರಿನಲ್ಲಿ ಕಿರುಕುಳ: ನಾಲ್ವರ ಬಂಧನ
Next articleಮುಂಬೈ ತಾಜ್ ಹೋಟೆಲ್‌ ಬ್ಲಾಸ್ಟ್ ಪ್ರಕರಣ: ತಹಾವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಅಮೆರಿಕ ಸುಪ್ರೀಂ ಕೋರ್ಟ್ ಆದೇಶ