
ಪಡುಬಿದ್ರಿ: ಸಾಲಬಾಧೆ ತಾಳಲಾರದೇ ಫ್ಯಾನ್ಗೆ ಚೂಡಿದಾರ್ ವೇಲ್ನಿಂದ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಪಡುಬಿದ್ರಿ ಬೇಂಗ್ರೆ ರಸ್ತೆಯ ಕೌಸರ್ ಮಂಜಿಲ್ನ ನಸ್ರುಲ್ಲಾ(29) ಎಂಬವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ .
ಮೂರು ತಿಂಗಳ ಹಿಂದೆ ವಿದೇಶದಿಂದ ಬಂದಿದ್ದರು. ನಸ್ರುಲ್ಲಾ ಅವರು ಪಡೆದಿದ್ದ ಮನೆ ಸಾಲ, ವೈಯಕ್ತಿಕ ಸಾಲಗಳನ್ನು ಹಿಂತಿರುಗಿಸಲು ಹಣಕಾಸು ಸಂಸ್ಥೆಯ ಮಂದಿ ಹುಡುಕಿಕೊಂಡು ಇವರ ಮನೆಗೆ ಬರುತ್ತಿದ್ದರು.
ತಮ್ಮ ಪತ್ನಿಯ ಆಭರಣಗಳನ್ನೂ ಅಡವಿಟ್ಟಿದ್ದ ನಸ್ರುಲ್ಲಾ ಇಂದು ಕೆಲ ಚಿನ್ನಾಭರಣಗಳನ್ನು ಬಿಡಿಸಿಕೊಂಡು ಬಂದಿದ್ದರು. ಸಂಜೆಯ ವೇಳೆ ಪತ್ನಿಯೊಂದಿಗೆ ಜಗಳವಾಡಿ, ತನ್ನ ಮೊಬೈಲನ್ನು ಪುಡಿಗೈದು ನೇರ ತಮ್ಮ ಬೆಡ್ರೂಮಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್ ಮಾಹಿತಿಗಳು ತಿಳಿಸಿವೆ.
