Home ಸುದ್ದಿಗಳು ರೈತರ ಜಮೀನು ವಕ್ಫ್ ಬೋರ್ಡ್ ಲೂಟಿ ಮಾಡಲು ಹೊರಟಿದೆ: ಆರ್.ಅಶೋಕ್

ರೈತರ ಜಮೀನು ವಕ್ಫ್ ಬೋರ್ಡ್ ಲೂಟಿ ಮಾಡಲು ಹೊರಟಿದೆ: ಆರ್.ಅಶೋಕ್

Waqf Board is going to loot farmers' land: R.Ashok

ಬೆಂಗಳೂರು: ರೈತರ ಜಮೀನು ವಕ್ಫ್ ಬೋರ್ಡ್ ಲೂಟಿ ಮಾಡಲು ಹೊರಟಿದೆ. ಅದರಿಂದ ಮುಕ್ತಿ ಸಿಗೋ ಯೋಗ ರೈತರಿಗೆ ಬರಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಸ್ಲಿಮರು ಮತಾಂತರ ಬಿಟ್ಟು ಈಗ ಜಮೀನಾಂತರ ಮಾಡ್ತಿದ್ದಾರೆ. ಅನ್ನದಾತನಿಗೆ ಕನ್ನ ಹಾಕೋ ಕೆಲಸ ಜಮೀರ್ ಮತ್ತು ಸಿದ್ದರಾಮಯ್ಯ ಟೀಂ ಮಾಡಿದೆ. ಕಾಂಗ್ರೆಸ್ ಅವರಿಗೆ ಮುಸ್ಲಿಂ ಭೂತ ಹಿಡಿದಿದೆ. ದೆವ್ವ ಬಿಡಿಸೋಕೆ ಹುಣಸೆ ಬರಲು ತಗೊಂಡು ಬಡಿಯೋ ವರೆಗೂ ಅವರಿಗೆ ದೆವ್ವ ಬಿಡೋದಿಲ್ಲ ಎಂದು ವ್ಯಂಗ್ಯವಾಡಿದರು.

ಕೋಲಾರ, ಚನ್ನಪಟ್ಟಣ, ಹುಬ್ಬಳ್ಳಿ, ಬೆಳಗಾವಿ ಎಲ್ಲಾ ಕಡೆ ನೋಟಿಸ್ ಹೋಗಿದೆ. ನುಸುಳುಕೋರರ ರೀತಿ ವಕ್ಫ್ ಬೋರ್ಡ್ ದಾಖಲೆ ತಿದ್ದುವ ಕೆಲಸ ಮಾಡ್ತಿದೆ. ಹೀಗಾಗಿ, ಇಡೀ ರಾಜ್ಯಾದ್ಯಂತ ನವೆಂಬರ್ 4 ರಂದು ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

ತಲೆ ಕೆಟ್ಟವನು ವಿಧಾನಸೌಧ ವಕ್ಫ್ ಆಸ್ತಿ ಅಂತಿದ್ದಾರೆ. ಸಂಸತ್ ಭವನ ವಕ್ಫ್ ಆಸ್ತಿ ಅಂತಿದ್ದಾರೆ. ಮುಸ್ಲಿಮರು ಯಾವಾಗ ಭಾರತಕ್ಕೆ ಬಂದರು? ಮುಸ್ಲಿಮರು ಮತಾಂತರ ಬಿಟ್ಟು ಈಗ ಜಮೀನಾಂತರ ಮಾಡ್ತಿದ್ದಾರೆ. ರೈತರ ಹೆಸರಿನಲ್ಲಿ ದಾಖಲಾತಿ ಆಗೋವರೆಗೂ ನಾವು ಹೋರಾಟ ಬಿಡೊಲ್ಲ ಎಂದರು.

 
Previous articleಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಕಳ್ಳರಿಬ್ಬರ ಬಂಧನ
Next articleಬಾಡಿಗೆ ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಜೋಡಿಯ ಬಂಧನ