
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಬಹಳಷ್ಟು ಸದ್ದು ಮಾಡ್ತಾ ಇದ್ದು ಅದರಲ್ಲಿ ಮಹಿಳಾ ಪರ ಯೋಜನೆ ಗೃಹಲಕ್ಷ್ಮಿ ಕೂಡ ಹೆಚ್ಚು ಸುದ್ದಿ ಮಾಡ್ತ ಇದೆ. ಈಗಾಗಲೇ ಎರಡು ತಿಂಗಳಿಂದ ಈ ಗೃಹಲಕ್ಷ್ಮಿ ಹಣ ಜಮೆ ಯಾಗಿಲ್ಲ. ಅಷ್ಟೇ ಅಲ್ಲದೆ ಈ ಗೃಹಲಕ್ಷ್ಮಿ ಯೋಜನೆ ರದ್ದಾಗುತ್ತೆ ಎನ್ನುವ ಚರ್ಚೆ ಕೂಡ ಜೋರಾಗಿದ್ದು ಈ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಗೃಹಲಕ್ಷ್ಮಿ ಹಣವನ್ನು ಮೇ 1ರಂದು ಮಹಿಳೆಯರ ಖಾತೆಗೆ ಜಮೆ ಮಾಡಿದ್ದೇವೆ. ಜೂನ್ ತಿಂಗಳ ಹಣ ಈಗಾಗಲೇ ಟ್ರೆಷರಿಗೆ ಹಾಕಿದ್ದು ಇಂದು ಅಥವಾ ನಾಳೆ ಗೃಹಲಕ್ಷ್ಮಿ ಹಣ ಯಜಮಾನಿಯ ಖಾತೆಗೆ ಕ್ರೆಡಿಟ್ ಆಗಲಿದೆ ಎಂದಿದ್ದಾರೆ. ಇನ್ನು ಈ ಯೋಜನೆ ಯಾವುದೇ ಕಾರಣಕ್ಕೂ ಸ್ಥಗಿತ ಆಗಲ್ಲ, ಕಾಂಗ್ರೆಸ್ ಪಕ್ಷದ ಸರ್ಕಾರ ಐದು ವರ್ಷ ಕಾರ್ಯಭಾರ ಮಾಡುತ್ತದೆ. ಐದು ವರ್ಷ ಕೂಡ ಗೃಹಲಕ್ಷ್ಮಿ ಮನೆ ಮನೆ ಬಾಗಿಲಿಗೆ ಹೋಗುತ್ತಾಳೆ ಗೃಹಲಕ್ಷ್ಮಿ ಯೋಜನೆ ಮುಂದುವರೆಯುತ್ತದೆ, ಯಾರೂ ಕೂಡ ಆತಂಕಕ್ಕೊಳಗಾಗುವುದು ಬೇಡ ಎನ್ನುವ ಸ್ಪಷ್ಟನೆ ನೀಡಿದ್ದಾರೆ.
ಹಣ ಬಾರದೇ ಇದ್ದಲ್ಲಿ ಹೀಗೆ ಮಾಡಿ
ಸಾಕಷ್ಟು ಮಹಿಳೆಯರು ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರೂ ಕೂಡ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿ ಕೊಂಡಿಲ್ಲ. ಆದ್ದರಿಂದ ಅಂತಹವರಿಗೆ ಹಣ ಬರುತ್ತಿಲ್ಲ. ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡರೂ ದಾಖಲೆ ಸರಿ ಇದ್ದರೆ ಮಾತ್ರ ಈ ಹಣ ಜಮೆಯಾಗಲಿದೆ.
ಇನ್ನು ನೀವು ಬೇರೆ ಬೇರೆ ಬ್ಯಾಂಕ್ ಖಾತೆಗಳಲ್ಲಿ ಅಕೌಂಟ್ ಹೊಂದಿದ್ದರೆ ಈ ಸಮಸ್ಯೆ ಹೆಚ್ಚು ಆಗ್ತಾ ಇದೆ. ಆದ್ದರಿಂದ ನೀವು ಬ್ಯಾಂಕ್ಗೆ ಭೇಟಿ ನೀಡಿ ನಿಮ್ಮ ಖಾತೆಗೆ ಆಧಾರ್ ಕಾರ್ಡ್ ಜೋಡಣೆ ಮಾಡಿಸಿಕೊಳ್ಳಿ.
ಇನ್ನು ಮಹಿಳೆಯರ ಆಧಾರ್ ಜೋಡಣೆ, ತಾಂತ್ರಿಕ ಸಮಸ್ಯೆ, ರೇಷನ್ ಕಾರ್ಡ್ ಪತಿಯ ಹೆಸರು ಬದಲಾವಣೆಯಾಗಿರುವುದು, ಇತ್ಯಾದಿ ಸಮಸ್ಯೆ ಇರಲಿದ್ದು ಈ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿದ್ದಾರೆ.
ಈ ತಿಂಗಳ ಹಣ?
ಜುಲೈ ತಿಂಗಳ ಗೃಹಲಕ್ಷ್ಮಿ ಹಣವೂ ಇದೇ ತಿಂಗಳ 20ರ ಒಳಗೆ ಮಹಿಳೆಯರ ಖಾತೆಗೆ ಜಮೆಯಾಗಬಹುದು ಎನ್ನಲಾಗಿದೆ. ಹಾಗಾಗಿ ಮಹಿಳೆಯರು ತಮ್ಮ ದಾಖಲೆ ಸರಿಪಡಿಸಲು ಇದ್ದರೆ ಸರಿ ಮಾಡುವ ಮೂಲಕ ಮತ್ತೆ ಅರ್ಜಿ ಹಾಕಲು ಅವಕಾಶ ಇರಲಿದೆ.
