Home ಸುದ್ದಿಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ಈ ಘೋಷಣೆಯಿಂದ ಅಂಚೆ ಇಲಾಖೆಯಲ್ಲಿ ಖಾತೆ ಸಂಖ್ಯೆ ದಿಢೀರ್ ಏರಿಕೆ

ಕಾಂಗ್ರೆಸ್ ಸರ್ಕಾರದ ಈ ಘೋಷಣೆಯಿಂದ ಅಂಚೆ ಇಲಾಖೆಯಲ್ಲಿ ಖಾತೆ ಸಂಖ್ಯೆ ದಿಢೀರ್ ಏರಿಕೆ

0
ಕಾಂಗ್ರೆಸ್ ಸರ್ಕಾರದ ಈ ಘೋಷಣೆಯಿಂದ ಅಂಚೆ ಇಲಾಖೆಯಲ್ಲಿ ಖಾತೆ ಸಂಖ್ಯೆ ದಿಢೀರ್ ಏರಿಕೆ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದಿರುವಂತಹ ಪಂಚ ಗ್ಯಾರಂಟಿ ಯೋಜನೆಗಳು ಬಹಳಷ್ಟು ಸದ್ದು ಮಾಡುತ್ತಿದೆ. ಹೌದು ಈಗಾಗಲೇ ಐದು ಗ್ಯಾರಂಟಿ ಯೋಜನೆಗಳನ್ನು ಜನ ಸಾಮಾನ್ಯರು ಬಳಸಿಕೊಳ್ತಾ ಇದ್ದಾರೆ. ಹಾಗಾಗಿ ಕಾಂಗ್ರೆಸ್ ಸರ್ಕಾರವು ಲೋಕಸಭೆ ಚುನಾವಣೆ ಸಂದರ್ಭದಲ್ಲೂ ಕೆಲವು ಪ್ರಣಾಳಿಕೆ ನೀಡಿತ್ತು. ಜನರಿಗೂ ಕೂಡ ಸರ್ಕಾರದ ಮೇಲೆ ವಿಶೇಷ ಒಲವು ಮೂಡಿಸಲು ಹೊಸ ಯೋಜನೆ ರೂಪಿಸುವುದಾಗಿ ಹೇಳಿತ್ತು. ಕೇಂದ್ರದಲ್ಲಿ ಕೂಡ ‌ವಿಭಿನ್ನ‌ ರೀತಿಯಲ್ಲಿ ಪಂಚ ಗ್ಯಾರಂಟಿ ಜಾರಿ ಮಾಡುತ್ತೇವೆ.‌ ಮಹಿಳೆಯರಿಗಾಗಿ ಹಲವು ವಿಶೇಷ ಯೋಜನೆ ರೂಪಿಸುವುದಾಗಿ ತಿಳಿಸಿತ್ತು.‌

ಮಹಾಲಕ್ಷ್ಮೀ ಯೋಜನೆ ಜಾರಿಯಲ್ಲಿ ಇದೆಯೇ?

ಲೋಕಸಭೆ ಚುನಾವಣೆಯ ಪೂರ್ವದಲ್ಲಿ‌ ಇಂಡಿಯಾ ಮೈತ್ರಿ ಕೂಟ ಅಧಿಕಾರ ಪಡೆದರೆ ಪಂಚ ಗ್ಯಾರೆಂಟಿ ನೀಡುವುದಾಗಿ ತಿಳಿಸಿದ್ದು, ಅದರಲ್ಲಿ ಮುಖ್ಯವಾಗಿ ಮಹಾಲಕ್ಷ್ಮೀ ಯೋಜನೆ ಒಂದಾಗಿದೆ. ಪ್ರಸ್ತುತ ಇರುವ  ಪಂಚ ಗ್ಯಾರಂಟಿ ಯೋಜನೆಗಳ ರೀತಿಯೇ ಈ ಒಂದು ಯೋಜನೆಯು ಕೂಡ ಮಹಿಳಾ ಅಭ್ಯರ್ಥಿಗಳಿಗೆ ವಾರ್ಷಿಕವಾಗಿ ಒಂದು ಲಕ್ಷ ಹಣವನ್ನು ಕೂಡ ನೀಡುತ್ತದೆ ಎನ್ನಲಾಗಿತ್ತು.

ಅರ್ಜಿ ಸಲ್ಲಿಸಲು ಕಾದು ನಿಂತ ಮಹಿಳೆಯರು

ಮಹಾಲಕ್ಷ್ಮೀ ಯೋಜನೆಯ ಮೂಲಕ ಮಹಿಳೆಯರಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಸಿಗಲಿದೆ. ಇದಕ್ಕಾಗಿ ಅಂಚೆ ಇಲಾಖೆಯಲ್ಲಿ ಖಾತೆ ತೆರೆಯಬೇಕು, ಮಹಿಳೆಯರಿಗೆ ಮಾತ್ರ ಈ ಅವಕಾಶ ಎನ್ನಲಾಗಿತ್ತು.‌ ಹೆಚ್ಚಿನ ಮಹಿಳೆಯರು ಪೋಸ್ಟ್ ಆಫೀಸ್ ನಲ್ಲಿ ಸರತಿ ಸಾಲಿನಲ್ಲಿ ನಿಂತು ಈ ಸೌಲಭ್ಯಕ್ಕಾಗಿ ಖಾತೆ ತೆರೆದಿದ್ದರು. ಆದರೆ  ‌ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿಲ್ಲ ಹಾಗಾಗಿ ಮಹಾಲಕ್ಷ್ಮೀ ಯೋಜನೆ ಕೂಡ ಜಾರಿ ಬಂದಿಲ್ಲ.

ಖಾತೆ ಸಂಖ್ಯೆ ಹೆಚ್ಚಳ

ಇದೀಗ ಒಂದು ಲಕ್ಷ ಸಿಗುತ್ತೆ ಎಂದು ಮಹಿಳೆಯರು ಅಂಚೆ ಇಲಾಖೆಗೆ ಮುತ್ತಿಗೆ ಹಾಕಿ ಖಾತೆ ತೆರೆದಿರುವ ನಿಟ್ಟಿನಲ್ಲಿ ಪೋಸ್ಟ್ ಆಫೀಸ್ ನಲ್ಲಿ ಖಾತೆ ಸಂಖ್ಯೆ ಹೆಚ್ಚಾಗಿದೆ‌. ಬರೀ ಒಂದು ತಿಂಗಳ ಒಳಗೆ‌ ಅಂಚೆ ಇಲಾಖೆಯಲ್ಲಿ ಲಕ್ಷಾಂತರ ಮಹಿಳೆಯರು ಖಾತೆ ತೆರೆದಿದ್ದಾರೆ. ಆದರೆ ಈ‌ ಮಹಾಲಕ್ಷ್ಮೀ ಯೋಜನೆ ಜಾರಿ ಬಂದಿಲ್ಲ.‌ ನೀವು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗಿಲ್ಲ.

 

LEAVE A REPLY

Please enter your comment!
Please enter your name here