Home ಸುದ್ದಿಗಳು ಹಣ ನೀಡುವಂತೆ ಪೀಡಿಸಿ, ಜೀವ ಬೆದರಿಕೆ: ಗಂಡ, ಆತನ ಮನೆಯವರ ವಿರುದ್ಧ ಮಹಿಳೆ ದೂರು

ಹಣ ನೀಡುವಂತೆ ಪೀಡಿಸಿ, ಜೀವ ಬೆದರಿಕೆ: ಗಂಡ, ಆತನ ಮನೆಯವರ ವಿರುದ್ಧ ಮಹಿಳೆ ದೂರು

0
ಹಣ ನೀಡುವಂತೆ ಪೀಡಿಸಿ, ಜೀವ ಬೆದರಿಕೆ: ಗಂಡ, ಆತನ ಮನೆಯವರ ವಿರುದ್ಧ ಮಹಿಳೆ ದೂರು

ಉಡುಪಿ: ಗಂಡ ಹಾಗೂ ಆತನ ಮನೆಯವರು ಹಣ ನೀಡುವಂತೆ ಪೀಡಿಸಿ, ಜೀವ ಬೆದರಿಕೆ ಒಡ್ಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ತೆಂಕನಿಡಿಯೂರು ಗ್ರಾಮದ ಸ್ವಾತಿ ನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದ ಯೋಗೀಶ್‌ ಆನ್‌ಲೈನ್‌ ಗೇಮಿಂಗ್‌ನಲ್ಲಿ ಹಣ ಕಳೆದುಕೊಂಡಿದ್ದು, ವಿಪರೀತ ಸಾಲ ಮಾಡಿಕೊಂಡಿದ್ದ. ತಾಯಿ ಮನೆಯಿಂದ ಹಣ ತರುವಂತೆ ಪತ್ನಿಗೆ ಪೀಡಿಸುತ್ತಿದ್ದ.

ಪತ್ನಿಯ ಒಡವೆಗಳನ್ನು ಅಡವಿಟ್ಟಿದ್ದಲ್ಲದೆ, ಆಕೆಗೆ ದೈಹಿಕ ಹಿಂಸೆ ಮಾಡುತ್ತಿದ್ದ. ಯೋಗೀಶ್‌ನ ಸಾಲವನ್ನು ಮರುಪಾವತಿಸಬೇಕು, ಇಲ್ಲವಾದಲ್ಲಿ ಮನೆಯಿಂದ ಹೊರ ಹಾಕುವುದಾಗಿ ಆತನ ತಾಯಿ, ತಮ್ಮ, ಅಕ್ಕ ಎಲ್ಲರೂ ಸೇರಿ ಸ್ವಾತಿ ಮೇಲೆ ಒತ್ತಡ ಹಾಕುತ್ತಿದ್ದರು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಸ್ವಾತಿ ಬೆಂಗಳೂರಿನಿಂದ ಪೆರ್ಡೂರಿನಲ್ಲಿರುವ ಗಂಡನ ಮನೆಗೆ ಬಂದಿದ್ದಾಗ, ಪತಿಯ ಮನೆಯವರೆಲ್ಲರೂ ಸೇರಿ ಹಣ ಕೊಡದಿದ್ದಲ್ಲಿ ಮನೆಗೆ ಬರುವುದು ಬೇಡ ಎಂದು ಹೊರ ಹಾಕಿದ್ದಾರೆ. ಅಲ್ಲದೆ ಯೋಗೀಶ್‌ ಕರೆ ಮಾಡಿ ಪತ್ನಿಗೆ ಜೀವ ಬೆದರಿಕೆ ಒಡ್ಡಿದ್ದಾನೆ.

ಇದುವರೆಗೆ ಸಾಲ ಮಾಡಿಸಿ ಹಾಗೂ ಬಲವಂತವಾಗಿ 46 ಲಕ್ಷ ರೂ.ಯನ್ನು ಪತ್ನಿಯಿಂದ ಯೋಗೀಶ್‌ ಪಡೆದುಕೊಂಡಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here