
ನವದೆಹಲಿ: ನನ್ನ ಹೇಳಿಕೆಯನ್ನು ಸಾರ್ವಜನಿಕ ವಲಯದಲ್ಲಿ ತಿರುಚುವ ಕೆಲಸ ಮಾಡಲಾಗುತ್ತಿದೆ. ನಾವು ಎಂದಿಗೂ ಅಂಬೇಡ್ಕರ್ ಅವರನ್ನು ಅವಮಾನಿಸುವುದಿಲ್ಲ. ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಹೇಳಿಕೆಯನ್ನು ಸಾರ್ವಜನಿಕ ವಲಯದಲ್ಲಿ ತಿರುಚುವ ಕೆಲಸ ನಡೆಯುತ್ತಿದೆ. ಈ ಹಿಂದೆ ಮೋದಿ ಅವರ ಹೇಳಿಕೆಯನ್ನು ಎಡಿಟ್ ಮಾಡಲಾಗಿತ್ತು. ಈಗ ನನ್ನ ಹೇಳಿಕೆಯನ್ನು ತಿರುವುವ ಕೆಲಸ ಮಾಡಲಾಗುತ್ತಿದೆ.
ಬಿಜೆಪಿಗೆ ಅವಮಾನ ಮಾಡದ ಪಕ್ಷದಿಂದ ನಾನು ಬರುತ್ತೇನೆ. ನಾವು ಎಂದಿಗೂ ಅಂಬೇಡ್ಕರ್ ಅವರನ್ನು ಅವಮಾನಿಸುವುದಿಲ್ಲ. ಅವರ ತತ್ವ ಸಿದ್ಧಾಂತಗಳನ್ನು ನಾವು ಪಾಲಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಂವಿಧಾನದ ಬಗ್ಗೆ ಎರಡು ಸದನಗಳಲ್ಲಿ ಚರ್ಚೆಯಾಗಿದೆ. ಗೌರವಯುತ ಚರ್ಚೆ ಆಯೋಜಿಸುವ ಕೆಲಸ ಮಾಡಿದೆ. ಪ್ರತಿ ಚರ್ಚೆಯಲ್ಲಿ ಆಡಳಿತ ಪಕ್ಷ ವಿರೋಧ ಪಕ್ಷದ ದೃಷ್ಟಿಕೋನ ಬದಲಿರುತ್ತದೆ. ಆದರೆ ಆಡುವ ಮಾತುಗಳು ಸತ್ಯವಾಗಿರಬೇಕು.
ಅಂಬೇಡ್ಕರ್ ಸೋಲಿಸಲು ಕಾಂಗ್ರೆಸ್ ಯಾವ ಅವಕಾಶವನ್ನು ಬಿಡಲಿಲ್ಲ. ಭಾರತ ರತ್ನ ನೀಡಲು ನಿರಾಕರಿಸಲಾಯಿತು. ಕಾಂಗ್ರೆಸ್ ನಾಯಕರು ತಮಗೆ ತಾವೇ ಭಾರತ ರತ್ನ ತೆಗೆದುಕೊಂಡರು. ಕಾಂಗ್ರೆಸ್ ಕಡೆ ತನಕ ಭಾರತ ರತ್ನ ನೀಡಲಿಲ್ಲ. ಅಂಬೇಡ್ಕರ್ ಜಯಂತಿ ಮಾಡಲು ನಿರಾಕರಿಸಿತು. ನೆಹರೂ ಅವರು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಮಂತ್ರಿಗಿರಿಗೆ ರಾಜೀನಾಮೆ ನೀಡುವುದರಿಂದ ಯಾವುದೇ ವ್ಯತಾಸ ಆಗುವುದಿಲ್ಲ ಎಂದು ಹೇಳಿದ್ದರು. ಜನ್ಮಸ್ಥಳ ನಿರ್ಮಾಣಕ್ಕೆ ಅವಕಾಶ ನಿರಾಕರಿಸಿದರು. ಕಾಂಗ್ರೆಸ್ ನಾಯಕರು ತಮ್ಮ ನಾಯಕರ ಹೆಸರಿನಲ್ಲಿ ದೇಶದ್ಯಾಂತ ಸ್ಮಾರಕ ಮಾಡಿಕೊಂಡರು ಎಂದು ಟೀಕಿಸಿದ್ದಾರೆ.
