ಹೈದರಾಬಾದ್: ಭಾರತದಲ್ಲಿ ಐಸಿಸಿ ಪುರಷರ ಕ್ರಿಕೆಟ್ ವಿಶ್ವಕಪ್ 2023 ನ ಶುಕ್ರವಾರದ ಪಂದ್ಯವು ಹೈದರಾಬಾದ್ನಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ಪಾಕಿಸ್ತಾನವು ನೆದರ್ಲ್ಯಾಂಡ್ ವಿರುದ್ಧ 81 ರನ್ ಗಳ ಭರ್ಜರಿ ಗೆಲುವನ್ನು ಸಾಧಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯದುಕೊಂಡ ನೆದರ್ಲ್ಯಾಂಡ್ ಆರಂಭದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ್ದು, ನೆದರ್ಲ್ಯಾಂಡ್ ನ ಶಿಸ್ತುಬದ್ಧ ಆಕ್ರಮಣದಿಂದ ಪಾಕಿಸ್ತಾನ ಆರಂಭದಲ್ಲಿಯೇ 38 ರನ್ಗಳಿಗೆ 3 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿತು. ಆದರೆ ನಂತರ ಬಂದ ಮಹಮ್ಮದ್ ರಿಜ್ವಾನ್ ಅವರು 68 ಎಸೆತಗಳಲ್ಲಿ 75 ರನ್ ಮತ್ತು ಸೌದ್ ಶಕೀಲ್ ಅವರು 68 ಎಸೆತಕ್ಕೆ 52 ರನ್ ಗಳಿಸುವ ಮೂಲಕ ಪಾಕಿಸ್ತಾನ ತಂಡಕ್ಕಾದ ಆಘಾತದಿಂದ ಚೇತರಿಸಿಕೊಳ್ಳಲು ಸಹಾಯ ಮಾಡಿದರು. ಆದರೂ ಸಹ ನೆದರ್ಲ್ಯಾಂಡ್ ಆಟಗಾರರು ಪಾಕಿಸ್ತಾನವನ್ನು 286 ರನ್ಗಳಿಗೆ ಕಟ್ಟಿ ಹಾಕಿದರು. ನಂತರ ಬ್ಯಾಟಿಂಗ್ಗೆ ಇಳಿದ ನೆದರ್ಲ್ಯಾಂಡ್ ತಂಡವು 41 ಓವರ್ಗಳಲ್ಲಿ 205 ರನ್ ಗಳನ್ನು ಗಳಿಸಿ ತನ್ನೆಲ್ಲಾ ವಿಕೆಟ್ ಗಳನ್ನ ಕಳೆದುಕೊಂಡು ಅಂತಿಮವಾಗಿ ಪಾಕ್ ಗೆ ಶರಣಾಯಿತು.
ಈ ಬಾರಿ ಒಟ್ಟು 10 ಸ್ಥಳಗಳಲ್ಲಿ 48 ಪಂದ್ಯಗಳು ನಡೆಯಲಿವೆ. 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯಗಳು ನರೇಂದ್ರ ಮೋದಿ ಸ್ಟೇಡಿಯಂ ಅಹಮದಾಬಾದ್, ಚಿನ್ನಸ್ವಾಮಿ ಕ್ರೀಡಾಂಗಣ ಬೆಂಗಳೂರು, ಎಂ.ಎ.ಚಿದಂಬರಂ ಸ್ಟೇಡಿಯಂ ಚೆನ್ನೈ, ಅರುಣ್ ಜೇಟ್ಲಿ ಸ್ಟೇಡಿಯಂ ದೆಹಲಿ, ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ ಧರ್ಮಶಾಲಾ, ಈಡನ್ ಗಾಡನ್ಸ್ ಕೋಲ್ಕತ್ತಾ, ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂ ಲಕ್ನೋ, ವಾಂಖೆಡೆ ಸ್ಟೇಡಿಯಂ ಮುಂಬೈ, ಎಂಸಿಎ ಅಂತರಾಷ್ಟ್ರೀಯ ಕ್ರೀಡಾಂಗಣ ಪುಣೆ, ರಾಜೀವ್ ಗಾಂಧಿ ಇಂಟರ್ ನ್ಯಾಟ್ ಸ್ಥಳಗಳಲ್ಲಿ ನಡೆಯಲಿವೆ. ಪಂದ್ಯವನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಎಲ್ಲಾ 48ಪಂದ್ಯಗಳನ್ನು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್ಸೈಟ್ ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗತ್ತದೆ.
