ಬೆಂಗಳೂರು: ಹೆರಿಗೆಯಾದ ಬಳಿಕ ಸರ್ಕಾರ ಮಹಿಳಾ ನೌಕರರಿಗೆ ಹೆರಿಗೆ ರಜೆಯನ್ನು ನೀಡಲಾಗುತ್ತಿತ್ತು. ಇದೀಗ ನೂತನ ಸರ್ಕಾರ ಒಂಟಿ ಪೋಷಕ ಸರ್ಕಾರಿ ಪುರುಷ ನೌಕರರಿಗೆ ಶಿಶುಪಾಲನಾ ರಜೆ ಸೌಲಭ್ಯ ನೀಡಿ ಆದೇಶ ಹೊರಡಿಸಿದೆ.
ಹೌದು, ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಜಯ್ ಎಸ್ ಕೊರಡೆ ಅವರು ಹೊರಡಿಸಿರುವ ಆದೇಶದಂತೆ ತಕ್ಷಣದಿಂದ ಜಾರಿಗೆ ಬರುವಂತೆ ಅವಿವಾಹಿತ, ವಿವಾಹ ವಿಚ್ಛೇದಿತ, ವಿಧುರ ಪುರುಷ ರಾಜ್ಯ ಸರ್ಕಾರ ನೌಕರರಿಗೂ ಗರಿಷ್ಠ 6 ತಿಂಗಳ ಕಾಲ ಶಿಶುಪಾಲನಾ ರಜೆಯನ್ನು ನೀಡಲಾಗಿದೆ. ಈ ಅವಧಿಯಲ್ಲಿ ಆತ ವಿವಾಹ ಮಾಡಿಕೊಂಡರೆ ಆ ದಿನದಿಂದ ಶಿಶುಪಾಲನಾ ರಜೆಯನ್ನು ರದ್ದುಗೊಳಿಸಲಾಗುವುದು ಎಂದು ಹೇಳಲಾಗಿದೆ.
