
ನವದೆಹಲಿ: ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ(ಇಪಿಎಫ್) ಸದಸ್ಯರು ಹೆಚ್ಚುವರಿ ಪಿಂಚಣಿಗೆ ಅರ್ಜಿ ಸಲ್ಲಿಸಲು ಮೂರನೇ ಬಾರಿಗೆ ಗಡುವನ್ನು ವಿಸ್ತರಣೆ ಮಾಡಲಾಗಿದೆ. ಜುಲೈ 11 ರವರೆಗೆ ಅಜಿ ಸಲ್ಲಿಸಲು ಅವಕಾಶ ನೀಡಿರುವ ಕುರಿತು ಇಪಿಎಫ್‌ಒ ಪ್ರಕಟಣೆ ಹೊರಡಿಸಿದೆ. ಮಾಚ್ 3 ರಂದು ಮೊದಲಬಾರಿಗೆ ಹೆಚ್ಚುವರಿ ಪಿಂಚಣಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂದು ಘೋಷಿಸಲಾಗಿತ್ತು. ಬಳಿಕ ಮತ್ತೆ ಗಡುವನ್ನು ವಿಸ್ತರಿಸಿ ಜೂನ್ 26 ಕ್ಕೆ ಗಡುವು ನೀಡಲಾಗಿತ್ತು. ಇದೀಗ ಮೂರನೇ ಬಾರಿಗೆ ಗಡುವನ್ನು ವಿಸ್ತರಿಸಲಾಗಿದು ಜುಲೈ 11 ಕ್ಕೆ ಡೆಡ್‌ಲೈನ್ ನೀಡಿದೆ. ಇದೀಗ ಅಹ ಸದಸ್ಯರಿಗೆ ಉತ್ತಮ ಅವಕಾಶ ದೊರಕಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.
