
ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ಅಧಿಕಾರಿಗಳ ವರ್ಗಾವಣೆ ಪರ್ವ ಕೂಡ ಮುಂದುವರಿಯುತ್ತಿದೆ. ಇದೀಗ ಮಂಗಳೂರು ಪಶ್ಚಿಮ ವಲಯದ ಎಸ್ಐಗಳನ್ನು ವರ್ಗಾವಣೆ ಮಾಡಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ 11 ಎಸ್ಐ ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಉಪ ಮಹಾನಿರೀಕ್ಷಕ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ. ಹಾಗಾದ್ರೆ ಯಾರನ್ನು ಎಲ್ಲಿಗೆ ವರ್ಗಾಯಿಸಲಾಗಿದೆ ಎನ್ನುವುದನ್ನು ತಿಳಿದುಕೊಳ್ಳಲು ಮುಂದಿನ ಮಾಹಿತಿ ಓದಿ.
ಎಸ್ಐ ರವಿ ಬಸಪ್ಪ ಕಾರಗಿ- ಅಜೆಕಾರು ಠಾಣೆ
ಎಸ್ಐ ನಿರಂಜನ್ ಹೆಗ್ಡೆ- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಠಾಣೆ
ಎಸ್ಐ ಮಹಾಂತೇಶ್ ಜಾಬ ಗೌಡ- ಹೆಬ್ರಿ ಠಾಣೆ
ಎಸ್ಐ ಸಕ್ತಿವೇಲು -ಶಿವ ಠಾಣೆ
ಎಸ್ಐ ಪುನೀತ್ ಕುಮಾರ್ ಬಿ.ಇ – ಉಡುಪಿ ನಗರ ಠಾಣೆ
ಎಸ್ಐ ಲಕ್ಷಣ- ಅಜೆಕಾರು ಠಾಣೆ
ಎಸ್ಐ ಮಧು ಬಿ.ಇ- ಶಂಕರನಾರಾಯಣ ಠಾಣೆ
ಎಸ್ಐ ದಿಲೀಪ್ ಜಿ.ಆರ್- ಕಾಕಳ ಗ್ರಾಮಾಂತರ ಠಾಣೆ
ಎಸ್ಐ ಸುಧಾ ಪ್ರಭು- ಕೋಟ ಠಾಣೆ
ಎಸ್ಐ ಅನಿಲ್ ಬಿ.ಎಂ- ಸಿದ್ಧಾಪುರ ಠಾಣೆ
ಎಸ್ಐ ಪುರುಷೋತ್ತಮ ಎ- ಕಾಪು ಠಾಣೆ
