
ಬೆಂಗಳೂರು: ರಾಜ್ಯ ಸರ್ಕಾರ ನೀಡಿದ್ದ 5 ಭರವಸೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಯಾವಾಗಿನಿಂದ ಜಾರಿಯಾಗುತ್ತದೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ. ಇಂದು ಚಾಲನೆ ದೊರಯಲಿದೆ, ನಾಳೆ ಚಾಲನೆ ದೊರೆಯಲಿದೆ ಎಂದು ಮಹಿಳೆಯರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇದೀಗ ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ 2000 ರೂ ನೀಡಲಾಗುತ್ತಿದ್ದು, ಈ ಯೋಜನೆಗೆ ಜುಲೈ 14 ರಿಂದ ಚಾಲನೆ ಆರಂಭಗೊಳ್ಳಲಿದೆ ಎನ್ನಲಾಗಿದೆ.
ಈ ಬಗ್ಗೆ ರಾಜ್ಯ ಸಚಿವ ಸಂಪುಟ ಸಬೆ ಬಳಿಕ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್, ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆಗೆ ಜುಲೈ 14 ರಿಂದ ಬಹುತೇಕ ಚಾಲನೆ ಸಿಗಲಿದೆ ಎಂದಿದ್ದಾರೆ.
ಗೃಹಲಕ್ಷ್ಮೀ ಯೋಜನೆಯಡಿ ಪ್ರತಿಕುಟುಂಬದ ಮಹಿಳೆಯ ಖಾತೆಗೆ ರೂ 2000 ಜಮಾ ಮಾಡಲಾಗುತ್ತದೆ. ಈ ಯೋಜನೆಯ ಸದುಪಯೋಗ ಪಡೆಯಲು ರೇಷನ್ಕಾರ್ಡ್, ಆಧಾರ್ಕಾರ್ಡ್, ಬ್ಯಾಂಕ್ಪಾಸ್ಬುಕ್ಹಾಗೂ ಯಾವುದದಾದರೂ ಒಂದು ಗುರುತಿನ ಚೀಟಿಯೊಂದಿಗೆ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ಬೆಂಗಳೂರು ಒನ್ ಕೇಂದ್ರಗಳಲ್ಲಿ ಹೋಗಿ ಸಲ್ಲಿಸಬಹುದಾಗಿದೆ. ಇನ್ನು, ಯೋಜನೆಗಾಗಿ ಪ್ರತ್ಯೇಕ ಆಯಪ್ಸಿದ್ಧಪಡಿಸಲಾಗಿದ್ದು, ಈ ಆಯಪ್ಮೂಲಕ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಈ ಯೋಜನೆಗೆ ಅಜೀ ಸಲ್ಲಿಸಲು ಕೊನೆಯ ದಿನಾಂಕ ಇರುವುದಿಲ್ಲ. ಅಜಿ ಸಲ್ಲಿಸಿದವರಿಗೆ ಆಗಸ್ಟ್17ಅಥವಾ 18ರಂದು ಹಣ ಜಮಾ ಮಾಡಲಾಗುತ್ತದೆ.
ಇನ್ನು, ಯಾವುದಾದರೂ ಹೊಸ ಆಯಪ್ ಗಳನ್ನು ಪರಿಚಯಿಸಿದಾಗ ಅಥವಾ ಅಜಿಗಳನ್ನು ಬಿಟ್ಟಾಗ ಸಾಮಾನ್ಯವಾಗಿ ನಕಲಿ ಆಯಪ್ ಗಳು ಸೃಷ್ಟಿಯಾಗುವುದು ಸಹಜ. ಅದರಂತೆಯೇ ಇದೀಗ ಗೃಹಲಕ್ಷ್ಮೀ ಯೋಜನೆ ಆಯಪ್ ಬಿಡುಗಡೆಗೂ ಮುನ್ನ ನಕಲಿ ಆಯಪ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಗೃಹಲಕ್ಷ್ಮೀ ಸ್ಕೀಮ್ ಆಯಪ್, ಗೃಹಲಕ್ಷ್ಮೀ ಯೋಜನಾ ಆಯಪ್, ಗೃಹಲಕ್ಷ್ಮೀ ಯೋಜನಾ ಅಪ್ಲಿಕೇಶನ್ ಎನ್ನುವ ಹೆಸರಿನಲ್ಲಿ ನಕಲಿ ಆಯಪ್ ಗಳು ಸೃಷ್ಟಿಯಾಗಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಲಾಗಿದೆ.
