
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ವಿದ್ಯುತ್, ತರಕಾರಿ, ಹಣ್ಣುಗಳ ಬೆಲೆಯಲ್ಲಿ ಏರಿಕೆಯಾಗಿದ್ದು, ಜನರು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಅಲ್ಲದೇ ಬೆಲೆ ಏರಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಇದೀಗ ಬೇಳೆ ಮತ್ತು ಅಕ್ಕಿಯ ಬೆಲೆ ಕೂಡ ಹೆಚ್ಚಾಗಿದ್ದು, ಜನರಿಗೆ ಬೆಲೆ ಏರಿಕೆಯ ಬಿಸಿ ತಲೆನೋವಾಗುವಂತೆ ಮಾಡಿದೆ.
ಅಕ್ಕಿ ಬೆಲೆ 10-12 ರೂ ವರೆಗೆ ಹೆಚ್ಚಳವಾಗಿದ್ದು, ಬೇಳೆಕಾಳುಗಳ ಬೆಲೆ ೨೦-೩೦ರವರೆಗೆ ಏರಿಕೆಯಾಗಿದೆ. ಈ ಹಿನ್ನೆಲೆ ಈಗಾಗಲೇ ಹಣ್ಣು, ತರಕಾರಿ ಹಾಗೂ ಇತರ ದೈನಂದಿನ ವಸ್ತುಗಳ ಬೆಲೆಯಿಂದ ತತ್ತರಿಸಿರುವ ಜನರು ಇದೀಗ ಅಕ್ಕಿ, ಬೇಳೆಕಾಳುಗಳ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದಾರೆ.
