
ಇಂದೋರ್: ಭಾರತದಲ್ಲಿ ಇತ್ತೀಚೆಗೆ ಲವ್ ಜಿಹಾದ್, ಮತಾಂತರದ ಕುರಿತು ಸಾಕಷ್ಟು ಸುದ್ದಿಗಳು ಕೇಳಿಬರುತ್ತಿದೆ. ಈ ಬಗ್ಗೆ ತೋರಿಸುವ ದಿ ಕೇರಳ ಸ್ಟೋರಿ ಸಿನಿಮಾವೂ ಕೂಡ ತೆರೆಗೆ ಬಂದಿದೆ. ಈ ವಿಚಾರವಾಗಿ ಸಾಕಷ್ಟು ಆಕ್ರೋಶಗಳೂ ಕೂಡ ಹೊರಬಿದ್ದಿದ್ದವು. ಈ ನಡುವೆ ಭಾರತದಲ್ಲಿ ಮತಾಂತರ ಆರಂಭವಾಗಿದ್ದೇ ಬಾಲಿವುಡ್ ನಿಂದ ಎಂದು ಮುಧ್ಯಪ್ರದೇಶದ ಐಎಎಸ್ ಕೇಡರ್ ಅಧಿಕಾರಿ ನಿಯಾಝ್ ಖಾನ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಭಾರತದಲ್ಲಿ ಅತೀ ಹೆಚ್ಚು ಮತಾಂತರ ನಡೆಯುವಲ್ಲಿ ಬಾಲಿವುಡ್ ನ ಪಾತ್ರ ಬಹುದೊಡ್ಡದಿದೆ. ಬಾಲಿವುಡ್ ನಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಬಿಂಬಿಸುವ ಸಿನಿಮಾಗಳನ್ನೇ ತೋರಿಸುವುದರಿಂದ ಯುವ ಸಮೂಹ ದಾರಿ ತಪ್ಪುತ್ತಿದೆ. ಪ್ರಜಾಪ್ರಭುತ್ವದ ರಾಷ್ಟ್ರವಾದ ನಮ್ಮಲ್ಲಿ ಎಲ್ಲಾ ಧರ್ಮಗಳಿಗೆ ಸಮಾನ ಸ್ಥಾನ ನೀಡಲಾಗಿದೆ. ಹೀಗಿರುವಾಗ ಬಲವಂತವಾಗಿ ಮತಾಂತರ ಮಾಡುವುದು ತಪ್ಪು, ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಬಲೆಗೆ ಬೀಳಿಸುವುದು ತಪ್ಪು ಎಂದು ಹೇಳಿದ್ದಾರೆ.
