
ಬೆಂಗಳೂರು: ಜುಲೈ 6 ಮತ್ತು 7 ರಂದು ಪ್ರಸಕ್ತ ಸಾಲಿನ ಜಿ20 ಶೃಂಗಸಭೆ ನಡೆಯಲಿದೆ. ಈ ಹಿನ್ನೆಲೆ ಇಂದಿನಿಂದಲೇ ತಾಜ್ವೆಸ್ಟೆಂಡ್ ಹೋಟೆಲ್ನ 1ಕಿ.ಮೀ.ವ್ಯಾಪ್ತಿಯಲ್ಲಿ ಡ್ರೋನ್ ಹಾಗೂ ಏರ್ಕ್ರಾಫ್ಟ್ ಹಾರಾಟ ನಿಷೇಧಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ.
ಜಿ20 ಶೃಂಗಸಭೆಗೆ ಸೆಪ್ಟೆಂಬರ್ನಲ್ಲಿ ನವದೆಹಲಿಯಲ್ಲಿ ಚಾಲನೆ ನೀಡಲಾಗಿದ್ದು, ಬೆಂಗಳೂರು ಸೇರಿದಂತೆ ಮೂರು ಕಡೆಗಳಲ್ಲಿ ಶೃಂಗಸಭೆ ನಡೆಯಲಿದೆ. ತಾಜ್ವೆಸ್ಟೆಂಡ್ ಹೋಟೆಲ್ ಸುತ್ತಮುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಓವ ಡಿಸಿಪಿ, ನಾಲ್ವರು ಎಸಿಪಿ, 11 ಇನ್ಸ್ಪೆಕ್ಟರ್, 32 ಪಿಎಸ್ಐ, 190 ಹೆಚ್ಸಿ, 40 ಪಿಸಿ ಸೇರಿ 500 ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
