
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೇಸ್ ಚುನಾವಣಾ ಪೂರ್ವದಲ್ಲಿ 5ಗ್ಯಾರಂಟಿಗಳನ್ನು ನೀಡಿತ್ತು. ಇದರಲ್ಲಿ ಬಡವರಿಗೆ ತಲಾ 10 ಕೆ.ಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಕೂಡ ಒಂದು. ಎಲ್ಲಾ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿರುವ ಸರ್ಕಾರಕ್ಕೆ, ಅನ್ನಭಾಗ್ಯವನ್ನು ಅನುಷ್ಠಾನಗೊಳಿಸಲು ಮಾತ್ರ ಹಲವಾರು ಕಂಟಕಗಳು ಎದುರಾಗುತ್ತಿವೆ. ಈ ಯೋಜನೆಗೆ ಬೇಕಾಗುವಷ್ಟು ಅಕ್ಕಿಯನ್ನು ಕೇಂದ್ರ ಕೊಡುತ್ತಿಲ್ಲ ಎಂದು ರಾಜ್ಯ ಸರ್ಕಾರ ನೇರವಾಗಿ ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ. ಈ ನಡುವೆ ಜನರಿಗೆ ಈ ಯೋಜನೆ ಸೌಲಭ್ಯ ಪಡೆಯುತ್ತೇವೋ ಇಲ್ಲವೋ ಎನ್ನುವ ಅನುಮಾನ ಆರಂಭವಾಗಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಆಹಾರ ನಿಗಮ ಅಕ್ಕಿ ನೀಡಲು ನಿರಾಕರಿಸಿದ್ದರೂ ಎನ್.ಸಿ.ಎಫ್, ನಾಫೆಡ್ ನಿಂದ ಹೆಚ್ಚುವರಿ ಅಕ್ಕಿ ಪಡೆಯಲು ಕ್ರಮ ಕೈಗೊಳ್ಳಲಾಗಿದೆ. ಸಮಯಕ್ಕೆ ಸರಿಯಾಗಿ ಹೆಚ್ಚುವರಿ ಅಕ್ಕಿ ಸಿಗದಿದ್ದರೆ ರಾಗಿ, ಜೋಳ ವಿತರಿಸುವ ಚಿಂತನೆ ಇದೆ ಎಂದು ಹೇಳಿದ್ದಾರೆ.
