Home ಸುದ್ದಿಗಳು ರಾಜ್ಯ ಬಿಗ್‌ ಬಾಸ್‌ ಖ್ಯಾತಿಯ ಪ್ರಶಾಂತ್ ಸಂಬರ್ಗಿ ವಿರುದ್ಧ ಎಫ್‌ಐಆರ್‌

ಬಿಗ್‌ ಬಾಸ್‌ ಖ್ಯಾತಿಯ ಪ್ರಶಾಂತ್ ಸಂಬರ್ಗಿ ವಿರುದ್ಧ ಎಫ್‌ಐಆರ್‌

0
ಬಿಗ್‌ ಬಾಸ್‌ ಖ್ಯಾತಿಯ ಪ್ರಶಾಂತ್ ಸಂಬರ್ಗಿ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಸದಾ ಕಾಂಟ್ರವರ್ಸಿಗಳ ಮೂಲಕವೇ ಸದ್ದು ಮಾಡುವ ಬಿಗ್‌ ಬಾಸ್‌ ಖ್ಯಾತಿಯ ಪ್ರಶಾಂತ್‌ ಸಂಬರ್ಗಿ ಅವರ ವಿರುದ್ಧ ಉದ್ಯಮಿಯೊಬ್ಬರು ಎಫ್‌ಐಆರ್‌ ದಾಖಲಿಸಿದ್ದಾರೆ.
ಹೌದು, ಪ್ರಶಾಂತ್‌ ಸಂಬರ್ಗಿಯವರು ಸದಾ ಒಂದಲ್ಲಾಒಂದು ವಿವಾದಗಳ ಮೂಲಕವೇ ಸುದ್ದಿಯಾಗುತ್ತಿದ್ದು, ಇತ್ತೀಚೆಗೆ ನಟಿ ರಾಗಿಣಿ ಹಾಗೂ ಸಂಜನಾ ಅವರ ಡ್ರಗ್ಸ್‌ ಕೇಸ್‌ ವಿಚಾರವಾಗಿಯೂ ಮುನ್ನಲೆಯಲ್ಲಿದ್ದರು, ಬಳಿಕ ಶಿವರಾಜ್‌ ಕುಮಾರ್‌ ಅವರ ಬಗ್ಗೆ ಸ್ಟೇಟ್‌ಮೆಂಟ್‌ ಕೊಡುವ ಮೂಲಕ ಜನರಿಗೆ ಕಂಗೆಣ್ಣಿಗೆ ಗುರಿಯಾಗಿದ್ದರು. ಇದೀಗ ಇವರ ವಿರುದ್ಧ ದೇವನಾತ್‌ ವೈಕ್ಯೆ ಎನ್ನುವವರು ಪ್ರಶಾಂತ್‌ ಸಂಬರ್ಗಿ ವಿರುದ್ಧ ಸುಳ್ಳು ದೂರು ದಾಖಲಿಸಿ ವಂಚನೆ ಎಸಗಿದ ಆರೋಪದ ಮೇಲೆ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ.
ಹಿನ್ನೆಲೆ: 2017ರಲ್ಲಿ ದೇವನಾತ್‌ ಎನ್ನವವರು ಮನೆಯ ಅಸಲಿ ದಾಖಲೆ, ಖಾಲಿ ಚೆಕ್‌ ಶ್ಯೂರಿಟಿ ನೀಡಿ ಪ್ರಶಾಂತ್‌ ಸಂಬರ್ಗಿಯಿಂದ ಸಾಲ ಪಡೆದು, ಬಳಿಕ ಅದೇ ವರ್ಷ ಡಿಸೆಂಬರ್‌ ನಲ್ಲಿ ಹಣ ವಾಪಸ್‌ ನೀಡಿದ್ದರು. ಆದರೆ ಪ್ರಶಾಂತ್‌ ಸಂಬರ್ಗಿಯವರು ಮಾತ್ರ ಬಡ್ಡಿ ಹಣ ನೀಡಬೇಕೆಂದು ಹೇಳಿ ಮನೆ ದಾಖಲೆ ನೀಡದೇ ದೇವನಾತ್‌ ಅವರನ್ನು ಸತಾಯಿಸಿದ್ದಲ್ಲದೇ ಬೇರೆಬೇರೆ ಠಾಣೆಯಲ್ಲಿ ಇವರ ವಿರುದ್ಧ ದೂರು ನೀಡಿದ್ದಾರೆ. ಈ ಹಿನ್ನೆಲೆ ಸುಳ್ಳು ದೂರು ದಾಖಲಿಸಿ ವಂಚನೆ ಎಸಗಿದ ಆರೋಪದ ಮೇಲೆ ಸಂಬರ್ಗಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

 

LEAVE A REPLY

Please enter your comment!
Please enter your name here