
ನವದೆಹಲಿ:ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೂರು ದಿನಗಳ ಕಾಲ ಅಮೇರಿಕ ಪ್ರವಾಸ ಕೈಗೊಂಡಿದ್ದು, ನ್ಯೂಯಾಕ್‌ನಿಂದ ವಾಷಿಂಗ್‌ಟನ್ ತಲುಪಿದ ಮೋದಿಯವರಿಗೆ ಅನಿವಾಸಿ ಭಾರತೀಯರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಇದೇ ವೇಳೆ ರಾಷ್ಟ್ರಗೀತೆಗಳನ್ನೂ ಕೂಡ ನುಡಿಸಲಾಯಿತು.
ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಿದ ಬಳಿಕ ಪ್ರಧಾನಿ ಮೋದಿ ವಾಷಿಂಗ್ ಟನ್ ಗೆ ತೆರಳಿದ್ದರು. ಈ ವೇಳೆ ಅವರಿಗೆ ಭರ್ಜರಿಯಾಗಿ ಸ್ವಾಗತವನ್ನು ಕೋರಲಾಯಿತು.
