Home ಕರಾವಳಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪ್ರೌಢಶಾಲಾ ವಿದ್ಯಾರ್ಥಿನಿ

ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪ್ರೌಢಶಾಲಾ ವಿದ್ಯಾರ್ಥಿನಿ

ಪುತ್ತೂರು: ಪ್ರೌಢಶಾಲಾ ವಿದ್ಯಾರ್ಥಿನಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪುತ್ತೂರಿನ ಪಡೀಲ್‌ ನಲ್ಲಿ ನಡೆದಿದೆ.
ಮೃತರನ್ನು ಕೊಕ್ಕಡ ಗ್ರಾಮದ ನೇತ್ರಾಳ ನಿವಾಸಿ ರೇಖಾ(15) ಎಂದು ಗುರುತಿಸಲಾಗಿದೆ.
ತಾಯಿಯ ನಿಧನದ ಬಳಿಕ ಮಾನಸಿಕವಾಗಿ ಕುಗ್ಗಿದ್ದ ರೇಖಾಳನ್ನು ಕೊಕ್ಕಡ ಪ್ರೌಢಶಾಲೆಯಿಂದ ಪುತ್ತೂರಿನ ಪಡೀಲ್‌ ಹಾಸ್ಟೆಲ್‌ ಗೆ ಸೇರಿಸಲಾಗಿತ್ತು. ಹಾಸ್ಟೆಲ್‌ ಗೆ ಹೋಗಲು ಮೊದಲು ನಿರಾಕರಿಸಿದ್ದ ರೇಖಾ ಬಳಿಕ ಹಾಸ್ಟೆಲ್‌ ಸೇರಲು ಒಪ್ಪಿಕೊಂಡಿದ್ದಳು ಎನ್ನಲಾಗಿದೆ.

 
Previous articleಕಾರು-ಲಾರಿ ನಡುವೆ ಅಪಘಾತ: ಒಂದೇ ಕುಟುಂಬದ ಆರು ಮಂದಿ ದುರ್ಮರಣ
Next articleಜೂನ್‌ 15ಕ್ಕೆ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ