
ಮುಂಬೈ: ಭಾರತ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಾಲಿ ನಾಯಕ ಎಂ ಎಸ್ ಧೋನಿ ಅವರನ್ನು ಮುಂಬೈನ ಏರ್‌ಪೋರ್ಟ್‌ನಲ್ಲಿ ಭೇಟಿಯಾಗಿದ್ದಾರೆ. ಈ ಬಗ್ಗೆ ಮೊಹಮ್ಮದ್ ಕೈಫ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದು, ಧೋನಿ ಭೇಟಿಯಾಗಿದ್ದು ತಮ್ಮ ಮಗನಿಗೆ ಸಾಕಷ್ಟು ಖುಷಿ ಕೊಟ್ಟಿದೆ ಎಂದು ಕೈಫ್ ತಿಳಿಸಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮಹೇಂದ್ರ ಸಿಂಗ್ ಧೋನಿ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಮೊಹಮ್ಮದ್ ಕೈಫ್ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.
ಮೊಹಮ್ಮದ್ ಕೈಫ್ ಕುಟುಂಬ, ಮುಂಬೈ ಏರ್‌ಪೋರ್ಟ್‌ನಲ್ಲಿ ಎಂ ಎಸ್ ಧೋನಿ ಕುಟುಂಬವನ್ನು ಭೇಟಿ ಮಾಡಿರುವ ಕೆಲವು ಫೋಟೋಗಳನ್ನು ಕೈಫ್ ಹಂಚಿಕೊಂಡಿದ್ದು,ಈ ಸಂದರ್ಭದಲ್ಲಿ ಧೋನಿ, ಪತ್ನಿ ಸಾಕ್ಷಿ ಹಾಗೂ ಝಿವಾ ಜತೆ ಮೊಹಮ್ಮದ್ ಕೈಫ್, ಕೈಫ್ ಪತ್ನಿ ಪೂಜಾ ಹಾಗೂ ಪುತ್ರ ಕಬೀರ್ ಮಾತುಕತೆ ನಡೆಸಿದ್ದು, ಬಳಿಕ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
