Home ಕ್ರೀಡೆ ಭಾರತ ಮತ್ತು ವೆಸ್ಟ್ ಇಂಡೀಸ್ ಸರಣಿ ಕ್ರಿಕೆಟ್ ವೇಳಾಪಟ್ಟಿ ಪ್ರಕಟ

ಭಾರತ ಮತ್ತು ವೆಸ್ಟ್ ಇಂಡೀಸ್ ಸರಣಿ ಕ್ರಿಕೆಟ್ ವೇಳಾಪಟ್ಟಿ ಪ್ರಕಟ

0
ಭಾರತ ಮತ್ತು ವೆಸ್ಟ್ ಇಂಡೀಸ್ ಸರಣಿ ಕ್ರಿಕೆಟ್ ವೇಳಾಪಟ್ಟಿ ಪ್ರಕಟ

ನವದೆಹಲಿ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳ ವೇಳಾಪಟ್ಟಿ ಪ್ರಕಟಗೊಂಡಿದೆ. ಸರಣಿಗಳು ಡೊಮಿನಿಕಾ ಮತ್ತು ಟ್ರಿನಿಡಾಡ್‌ನಲ್ಲಿ ಆಯೋಜಿಸಲಾಗಿದೆ ಎನ್ನಲಾಗಿದೆ.

ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಜುಲೈ 12-16: ಡೊಮಿನಿಕಾದಲ್ಲಿ ಮೊದಲ ಟೆಸ್ಟ್ ಮತ್ತು ಜುಲೈ 20-24: ಟ್ರಿನಿಡಾಡ್‌ನಲ್ಲಿ 2ನೇ ಟೆಸ್ಟ್ ಸರಣಿ ನಡೆಯಲಿದೆ ಎಂದು ತಿಳಿದುಬಂದಿದೆ. ಟಿ-ಟ್ವೆಂಟಿ: ಆಗಸ್ಟ್ 4ರಂದು ಟ್ರಿನಿಡಾಡ್‌ನಲ್ಲಿ 1 ನೇ T20I, ಆಗಸ್ಟ್ 6: ಗಯಾನಾದಲ್ಲಿ 2 ನೇ T20I, ಆಗಸ್ಟ್ 8: ಗಯಾನಾದಲ್ಲಿ 3ನೇ ಟಿ20, ಆಗಸ್ಟ್ 12 : ಫ್ಲೋರಿಡಾದಲ್ಲಿ 4 ನೇ T20I ಮತ್ತು ಆಗಸ್ಟ್ 13 : ಫ್ಲೋರಿಡಾದಲ್ಲಿ 5ನೇ T20 ಪಂದ್ಯ ನಡೆಯಲಿದೆ.

ಜುಲೈ 27: ಬಾರ್ಬಡೋಸ್‌ನಲ್ಲಿ ಮೊದಲ ಏಕದಿನ, ಜುಲೈ 29: ಬಾರ್ಬಡೋಸ್‌ನಲ್ಲಿ 2ನೇ ಏಕದಿನ, ಆಗಸ್ಟ್ 1 : ಟ್ರಿನಿಡಾಡ್‌ನಲ್ಲಿ 3ನೇ ಏಕದಿನ ಪಂದ್ಯ ನಡೆಯಲಿದೆ.
ಸದ್ಯ ಆಸ್ಟ್ರೇಲಿಯಾ ಜತೆ ನಡೆಯುತ್ತಿರುವ ವಿಶ್ವ ಟೆಸ್ಟ್ ಕ್ರಿಕೆಟ್ ಫೈನಲ್ ಬಳಿಕ ಒಂದು ತಿಂಗಳ ಕಾಲ ಬಿಡುವಿನಲ್ಲಿದೆ ಎನ್ನಲಾಗಿದೆ.

 

LEAVE A REPLY

Please enter your comment!
Please enter your name here