Home ಕ್ರೀಡೆ ಐಸಿಸಿ ಪುರಷರ ಕ್ರಿಕೆಟ್‌ ವಿಶ್ವಕಪ್‌ 2023: ಭಾರತದ ವಿರದ್ಧ ಟಾಸ್‌ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್‌ ಆಯ್ಕೆ

ಐಸಿಸಿ ಪುರಷರ ಕ್ರಿಕೆಟ್‌ ವಿಶ್ವಕಪ್‌ 2023: ಭಾರತದ ವಿರದ್ಧ ಟಾಸ್‌ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್‌ ಆಯ್ಕೆ

ಚೆನ್ನೈ:ಭಾರತದಲ್ಲಿ ಐಸಿಸಿ ಪುರಷರ ಕ್ರಿಕೆಟ್‌ ವಿಶ್ವಕಪ್‌ 2023ರ ಇಂದಿನ ಹೈವೋಲ್ಟೇಜ್‌ ಪಂದ್ಯವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಭಾರತದ ವಿರದ್ಧ ಟಾಸ್‌ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್‌ ಅನ್ನು ಆಯ್ದುಕೊಂಡಿದೆ. ಈವರೆಗೆ ವಿಶ್ವಕಪ್‌ ನಲ್ಲಿ 12 ಬಾರಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದು, ಆಸ್ಟ್ರೇಲಿಯಾ 8 ಬಾರಿ ಭಾರತ 4 ಬಾರಿ ಗೆಲುವನ್ನು ಸಾಧಿಸಿದ್ದು, ಈ ಬಾರಿಯ ಪಂದ್ಯ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.

ಭಾರತ ತಂಡದಲ್ಲಿ ಆರಂಭದಲ್ಲಿ ರೋಹಿತ್‌ ಶರ್ಮಾ ಜೊತೆ ಇಶಾನ್‌ ಕಿಶನ್‌ ಆಡಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ವಿರಾಟ್‌ ಕೋಹ್ಲಿ, ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್‌ ಆಡಲಿದ್ದಾರೆ. ಕೆ.ಎಲ್‌ ರಾಹುಲ್‌ ವಿಕಟ್‌ ಕೀಪರ್‌ ಆಗಿ ಕಣಕ್ಕಿಳಿಯಲಿದ್ದು, ಆಲ್‌ರೌಂಡರ್‌ಗಳಾಗಿ ಹಾದ್ರಿಕ್‌ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಇರಲಿದ್ದಾರೆ. ತಂಡದಲ್ಲಿ ರವಿಚಂದ್ರನ್‌ ಅಶ್ವಿನ್‌, ಜಸ್ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಕುಲ್ದೀಪ್‌ ಯಾದವ್‌ ಇರಲಿದ್ದಾರೆ.

ಆಸ್ಟ್ರೇಲಿಯಾ ತಂಡದ ನಾಯಕತ್ವವನ್ನು ಪ್ಯಾಟ್‌ ಕಮಿನ್ಸ್‌ ವಹಿಸಿಕೊಳ್ಳಲಿದ್ದು, ಡೇವಿಡ್‌ ವಾರ್ನರ್ ಹಾಗೂ ಸ್ಟೀವ್‌ ಸ್ಮಿತ್‌ ಬ್ಯಾಟಿಂಗ್‌ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಆಲ್‌ರೌಂಡರ್‌ ಆಗಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಪ್ಯಾಟ್‌ ಕಮಿನ್ಸ್‌ ಆಡಲಿದ್ದಾರೆ. ತಂಡದಲ್ಲಿ ಅಲೆಕ್ಸ್‌ ಕ್ಯಾರಿ, ಜೋಶ್‌ ಹ್ಯಾಜಲ್ವುಡ್, ಸೀನ್‌ ಅಬಾಟ್‌, ಕ್ಯಾಮರಾನ್‌ ಗ್ರೀನ್‌, ಟ್ರಾವಿಸ್‌ ಹೆಡ್‌, ಮಾರ್ನಸ್ ಲ್ಯಾಬುಸ್‌ಚಾಗ್ನೆ, ಮಿಚ್‌ ಮಾರ್ಷ್, ಮಾರ್ಕಸ್ ಸ್ಟೋಯಿನಿಸ್‌, ಆಡಮ್‌ ಝಂಪಾ, ಮಿಚೆಲ್‌ ಸ್ಟಾರ್ಕ್ ಆಡಲಿದ್ದಾರೆ.

 
Previous articleಅಘಾನಿಸ್ತಾನದಲ್ಲಿ 6.3ತೀವ್ರತೆ ಭೂಕಂಪ: 2,000ಕ್ಕೂ ಅಧಿಕ ಮಂದಿ ಸಾವು
Next articleಬ್ರಹ್ಮಾವರ ಸಕ್ಕೆರ ಕಾರ್ಖಾನೆ ಗುಜರಿ ಮಾರಾಟದಲ್ಲಿ ಭ್ರಷ್ಟಾಚಾರ: ನಾಳೆ ಬೃಹತ್‌ ಪ್ರತಿಭಟನಾ ಜಾಥಾ