Home ಕ್ರೀಡೆ ಏಕದಿನ‌ ವಿಶ್ವಕಪ್ ಗೆ ಆರ್. ಅಶ್ವಿನ್ ಆಯ್ಕೆ, ಅಕ್ಷರ್ ಪಟೇಲ್ ಔಟ್

ಏಕದಿನ‌ ವಿಶ್ವಕಪ್ ಗೆ ಆರ್. ಅಶ್ವಿನ್ ಆಯ್ಕೆ, ಅಕ್ಷರ್ ಪಟೇಲ್ ಔಟ್

0
ಏಕದಿನ‌ ವಿಶ್ವಕಪ್ ಗೆ ಆರ್. ಅಶ್ವಿನ್ ಆಯ್ಕೆ, ಅಕ್ಷರ್ ಪಟೇಲ್ ಔಟ್

ನವದೆಹಲಿ: ಅಕ್ಟೋಬರ್ ನಿಂದ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಪಂದ್ಯಾವಳಿಗೆ ಭಾರತ ತಂಡದ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಅವರನ್ನು ಆಯ್ಕೆ ಮಾಡಲಾಗಿದೆ. ಭಾರತ ತಂಡದಲ್ಲಿ ಕೊನೆಯ ಕ್ಷಣದಲ್ಲಿ ಬದಲಾವಣೆ ಮಾಡಲಾಗಿದೆ. ಬಾಂಗ್ಲಾದೇಶದ ವಿರುದ್ಧದ ಏಷ್ಯಾ ಕಪ್ ಸೂಪರ್ ಫೋರ್ ಮುಖಾಮುಖಿಯಲ್ಲಿ ಗಾಯಗೊಂಡಿದ್ದ ಅಕ್ಷರ್ ಪಟೇಲ್ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ.
ಹೀಗಾಗಿ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಂಡ ಸೇರಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಅಶ್ವಿನ್ 4 ವಿಕೆಟ್ ಪಡೆದಿದ್ದರು. ಅಲ್ಲದೇ ಅನುಭವಿ ಆಟಗಾರ ಅಶ್ವಿನ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಬೇಕು ಎಂದು ಅನೇಕ ಹಿರಿಯ ಆಟಗಾರರು ಸಲಹೆ ನೀಡಿದ್ದರು.

 

LEAVE A REPLY

Please enter your comment!
Please enter your name here