ಮಂಗಳೂರು: ಸ್ಯಾಂಡಲ್‌ವುಡ್ ನಟಿ ಪ್ರೇಮಾ ಅವರು ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ದೇವಾಲಯದ ವತಿಯಿಂದ ನಟಿ ಪ್ರೇಮಾ ಅವರಿಗೆ ಕಮಾಲಾದೇವಿ ಪ್ರಸಾದ್ ಆಸ್ರಣ್ಣ ಅವರು ದೇವರ ಶೇಷ ವಸ್ತ್ರ ಪ್ರಸಾದ ನೀಡಿದರು. ನಂತರ ನಟಿ ಪ್ರೇಮಾ ಅವರು ದೇವಸ್ಥಾನದ ಆನೆಯ ಬಳಿ ಸ್ವಲ್ಪ ಸಮಯ ಕಳೆದು ಆನೆಯ ಬಳಿ ಆಶೀರ್ವಾದವನ್ನು ಕೂಡ ಪಡೆದರು.
