Home ಕಂಬಳ ಮಂಗಳೂರು ಕಂಬಳ: ನಂದಳಿಕೆ ಶ್ರೀಕಾಂತ್ ಭಟ್ರ ಕೋಣಗಳಿಗೆ ಪ್ರಥಮ‌-ದ್ವಿತೀಯ ಬಹುಮಾನ

ಮಂಗಳೂರು ಕಂಬಳ: ನಂದಳಿಕೆ ಶ್ರೀಕಾಂತ್ ಭಟ್ರ ಕೋಣಗಳಿಗೆ ಪ್ರಥಮ‌-ದ್ವಿತೀಯ ಬಹುಮಾನ

ಮಂಗಳೂರು: ಮಂಗಳೂರಿನ ಬಂಗ್ರಕೂಳೂರು “ರಾಮ – ಲಕ್ಷ್ಮಣ” ಜೋಡುಕರೆ ಕಂಬಳ ಕೂಟದದಲ್ಲಿ ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ರ ಕೋಣಗಳು ಗೆದ್ದು ಬೀಗಿವೆ. ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ‌ ಹಾಗೂ ದ್ವಿತೀಯ ಬಹುಮಾನಗಳು ನಂದಳಿಕೆ ಪಾಲಾಗಿದೆ‌. ಹಗ್ಗ ಹಿರಿಯ ವಿಭಾಗದಲ್ಲಿ ಒಟ್ಟು 22 ಜತೆ ಕೋಣಗಳು ಭಾಗವಹಿಸಿದ್ದವು. ಇನ್ನು ಫೈನಲ್ ನಲ್ಲಿ ನಂದಳಿಕೆಯ ಕೋಣಗಳು 11.37 ಸೆಕೆಂಡ್ ನಲ್ಲಿ ಓಡಿರುವುದು ಮತ್ತೊಂದು ವಿಷೇಶ‌.

ಕಂಬಳ ಕೂಟದಲ್ಲಿ ಕನೆಹಲಗೆಯಲ್ಲಿ 8 ಜೊತೆ, ಅಡ್ಡಹಲಗೆ 4, ಹಗ್ಗ ಹಿರಿಯ 22, ನೇಗಿಲು ಹಿರಿಯ 29 ಜೊತೆ, ಹಗ್ಗ ಕಿರಿಯ 26 ಜೊತೆ, ನೇಗಿಲು ಕಿರಿಯ 81 ಜೊತೆ ಒಟ್ಟು 170 ಜೊತೆ ಕೋಣಗಳು ಭಾಗವಹಿಸಿದ್ದು, ಫಲಿತಾಂಶ ಹೀಗಿದೆ.

ಕನೆಹಲಗೆ: ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ

ದ್ವಿತೀಯ: ಬೇಲಾಡಿ ಬಾವ ಅಶೋಕ್ ಶೆಟ್ಟಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಅಡ್ಡ ಹಲಗೆ: ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ, ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ. ದ್ವಿತೀಯ: ಮಂಗಳೂರು ಕಂಬಳಾಭಿಮಾನಿ ವಕೀಲ ವೃಂದ, ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

ಹಗ್ಗ ಹಿರಿಯ: ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ “ಎ” ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ, ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ “ಸಿ”
ಓಡಿಸಿದವರು: ಕಾವೂರು ದೋಟ ಸುದರ್ಶನ್

ಹಗ್ಗ ಕಿರಿಯ: ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗಿಶ್ ಪೂಜಾರಿ, ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್, ದ್ವಿತೀಯ: ಸಾಲಿಗ್ರಾಮ ಕಾರ್ಕಡ ಪುಟ್ಟು ಹೊಳ್ಳರಮನೆ ನಟರಾಜ್ ಹೊಳ್ಳ ಓಡಿಸಿದವರು: ಪಣಪೀಲ ಪ್ರವೀಣ್ ಕೋಟ್ಯಾನ್

ನೇಗಿಲು ಹಿರಿಯ: ಪ್ರಥಮ: ಬೋಳದಗುತ್ತು ಸತೀಶ್ ಶೆಟ್ಟಿ “ಬಿ” ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ. ದ್ವಿತೀಯ: ಹೊಸ್ಮಾರ್ ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ “ಎ” ಓಡಿಸಿದವರು: ಬೈಂದೂರು ಮಂಜುನಾಥ ಗೌಡ

ನೇಗಿಲು ಕಿರಿಯ: ಪ್ರಥಮ: ಕಟೀಲು ಕಿನ್ನಿಗೋಳಿ ಪ್ರಖ್ಯಾತ್ ಪ್ರಣೀತ್ ಶೆಟ್ಟಿ ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್, ದ್ವಿತೀಯ: ಮೂಡುಬೆಳ್ಳೆ ಜವನೆರ್ ಓಡಿಸಿದವರು: ಹೀರೆಬೆಟ್ಟು ಪ್ರದೀಪ್.

 
Previous articleನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಬಂದಿಲ್ಲವೇ? ವಿಶೇಷ ಶಿಬಿರದಲ್ಲಿ ದಾಖಲೆ ಸಲ್ಲಿಸಿ
Next articleಗೃಹಲಕ್ಷ್ಮೀ ಪಿಂಕ್ ಕಾರ್ಡ್ ಅಗತ್ಯವೇ? ಯಾರ ಬಳಿ ಈ ಕಾರ್ಡ್ ಇರಬೇಕು?