ಮಿಯ್ಯಾರು ಕಂಬಳ ಸಮಿತಿ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಾಳೆ ಮಿಯ್ಯಾರಿನಲ್ಲಿ 20 ನೇ ವರ್ಷದ ಲವ ಕುಶ ಜೋಡುಕೆರೆ ಕಂಬಳ ನಡೆಯಲಿದ್ದು ತಯಾರಿ ಜೋರಾಗಿಯೇ ನಡೆಯುತ್ತಿದೆ.
ವಿವಿಧ ಗಣ್ಯರ ಆಗಮನ
ಕಂಬಳ ಸಮಿತಿ ಅಧ್ಯಕ್ಷ ವಿ. ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು ಸಂಜೆ 7ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮೀ ಹೆಬ್ಬಾಳ್ಳರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮೂಡುಬಿದಿರೆ ಶಾಸಕ ಉಮನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೆಗೌಡ, ಹಿಂದುಳಿದ ವರ್ಗಗಗಳ ಇಲಾಖೆಯ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ.
ಕಂಬಳ ಓಟಗಾರರಿಗೆ ಸನ್ಮಾನ ಕಾರ್ಯಕ್ರಮ
35 ವರ್ಷಗಳ ಕಾಲ ಕಂಬಳ ಓಟಗಾರರಾಗಿದ್ದ ಕಾಬೆಟ್ಟು ಮನೆತನದ ಹಿರಿಯ ವ್ಯಕ್ತಿಯಾದ ಸುಂದರ ಹೆಗ್ಡೆ, ತೀರ್ಪುಗಾರರು ಆಗಿರುವ ಕೆರ್ವಾಶೆ ನಾರಾಯಣ ಬಂಗೇರಾ ಅವರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ.
