
ನವದೆಹಲಿ: ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ದಿ ಕೇರಳ ಸ್ಟೋರಿ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಕೋಟಿಗಟ್ಟಲೆ ಕಲೆಕ್ಷನ್ ಮಾಡುವ ಮೂಲಕ ಭಜರಿ ಸೌಂಡ್ ಮಾಡಿತ್ತು. ಇದೀಗ ಇದೇ ತಂಡ ಮತ್ತೊಂದು ಸಿನಿಮಾವನ್ನು ಘೋಷಿಸಿದ್ದು, ಸಿನಿಮಾದ ಕೆಲಸಗಳು ಈಗಾಗಲೇ ಆರಂಭವಾಗಿದೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಿರ್ದೇಶಕ ಸುದೀಪ್ರೋ ಸೇನ್, ನೈಜ ಘಟನೆ ಆಧಾರಿತ ಬಸ್ತರ್ ಎನ್ನುವ ಸಿನಿಮಾ 2024 ಏಪ್ರಿಲ್ ನಲ್ಲಿ ತೆರೆ ಮೇಲೆ ಬರಲಿದೆ ಎಂದು ಹೇಳಿದ್ದಾರೆ. ಮುಂದೆ ಯಾವ ಸ್ಟೋರಿ ಮುಖಾಂತರ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎನ್ನುವುದು ಮಾತ್ರ ಕುತೂಹಲಕಾರಿ ವಿಷಯವಾಗಿದೆ.
