ಬೆಂಗಳೂರು: ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ನೀಡುವ ಸಾಲದ ಮೊತ್ತವನ್ನು ಹೆಚ್ಚು ಮಾಡುವುದಾಗಿ ಭರವಸೆ ನೀಡಿತ್ತು.
5ಗ್ಯಾರಂಟಿಗಳ ಜೊತೆಗೆ ಈ ಭರವಸೆಯನ್ನು ಈಡೇರಿಸಲು ಮುಂದಾಗಿರುವ ಸಕಾರ 3ಲಕ್ಷ ರೂ ನಿಂದ 5ಲಕ್ಷ ರೂ ಗೆ ಹೆಚ್ಚಳ ಮಾಡುವುದಾಗಿ ಹೇಳಿದೆ.
ಈ ಬಗ್ಗೆ ಮಾತನಾಡಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ, ನಮ್ಮ ಸರ್ಕಾರ ಭರವಸೆ ನೀಡಿದಂತೆ, ಶೇಕಡಾ 3ರ ಬಡ್ಡಿದರದಲ್ಲಿ ನೀಡುವ ಮಧ್ಯಮಾವಧಿ ಸಾಲದ ಮೊತ್ತವನ್ನು 10ಲಕ್ಷ ರೂ ನಿಂದ 20ಲಕ್ಷ ರೂ ಗೆ ಹೆಚ್ಚಳ ಮಾಡುತ್ತೇವೆ. ಅಲ್ಲದೇ ರೈತರಿಗೆ ಗುರಿ ಮೀರಿ ಸಾಲ ನೀಡಲಾಗುತ್ತಿದೆ. ಈ ವರ್ಷವೂ ರೈತರಿಗೆ ಯಾವುದೇ ತೊಂದರೆಯಾಗದಂತೆ ಸಾಲ ವಿತರಿಸಲಾಗುವುದು ಎಂದಿದ್ದಾರೆ.
