Home Uncategorized ಪಡುಬಿದ್ರಿ: ಚಲಿಸುತ್ತಿದ್ದ ಬಸ್ ನಲ್ಲಿ ಚಾಲಕನಿಗೆ ಎದೆನೋವು; ಇಳಿಜಾರಿಗಿಳಿದ ಬಸ್

ಪಡುಬಿದ್ರಿ: ಚಲಿಸುತ್ತಿದ್ದ ಬಸ್ ನಲ್ಲಿ ಚಾಲಕನಿಗೆ ಎದೆನೋವು; ಇಳಿಜಾರಿಗಿಳಿದ ಬಸ್

ಪಡುಬಿದ್ರಿ: ಬಸ್ ಚಾಲನೆ ಮಾಡುತ್ತಿದ್ದಾಗಲೇ ಚಾಲಕನಿಗೆ ಹಠಾತ್ ಎದೆನೋವು ಕಾಣಿಸಿಕೊಂಡು ಬಸ್ ಹೆದ್ದಾರಿ ಪಕ್ಕದ ಇಳಿಜಾರಿಗಿಳಿದು ನಿಂತ ಘಟನೆ ಫೆ. 12ರ ಬುಧವಾರ ಬೆಳಿಗ್ಗೆ ಸಂಭವಿಸಿರುವುದಾಗಿ ವರದಿಯಾಗಿದೆ.

ಉಡುಪಿಯತ್ತ ಹೋಗುತ್ತಿದ್ದ ತಡೆರಹಿತ ಬಸ್ ನ ಚಾಲಕ ಶಂಭು ಎಂಬವರಿಗೆ ತೆಂಕ ಎರ್ಮಾಳಿನ ಮಸೀದಿ ಬಳಿ ಎದೆನೋವು ಕಾಣಿಸಿಕೊಂಡಿದ್ದು ಬಸ್ ಹೆದ್ದಾರಿ ಪಕ್ಕ ಇಳಿಜಾರಿಗಿಳಿದಿದೆ. ಘಟನೆಯಲ್ಲಿ ಕೆಲವು ಪ್ರಯಾಣಿಕರಿಗೆ ಗಾಯವಾಗಿರುವ ಬಗ್ಗೆ ವರದಿಯಾಗಿದೆ.

ಘಟನೆ ನಡೆದ ಕೂಡಲೇ ಬಸ್ ಚಾಲಕ ಹಾಗೂ ಗಾಯಗೊಂಡಿದ್ದ ಪ್ರಯಾಣಿಕರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.

 

 

 
Previous articleಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ದೈವಾಧೀನ
Next articleಕೊಂಕಣ ಮಾರ್ಗದಲ್ಲಿ ವಿಶೇಷ ಕುಂಭ ಮೇಳ ರೈಲು ಓಡಿಸಲು ಸಂಸದರಿಂದ ರೈಲ್ವೆ ಸಚಿವರಿಗೆ ಮನವಿ