
ರೈತ ಈ ದೇಶದ ಬೆನ್ನೆಲುಬು, ರೈತ ಕೃಷಿ ಚಟುವಟಿಕೆಯನ್ನು ನಡೆಸಿದ್ರೆ ಮಾತ್ರ ಇತರ ಚಟುವಟಿಕೆಗಳು ಅಭಿವೃದ್ಧಿಯಾಗಲು ಸಾಧ್ಯ. ರೈತ ಪರವಾದ ಕೆಲಸಗಳನ್ನು ಸರ್ಕಾರ ಇಂದು ಮಾಡುತ್ತಲೆ ಇದೆ. ರಾಜ್ಯ ಮತ್ತು ಕೇಂದ್ರ ಸರಕಾರ ಕೃಷಿ ಚಟುವಟಿಕೆಗೆ ಬೆಂಬಲ ನೀಡುವ ಅನೇಕ ವಿಧವಾದ ಯೋಜನೆಗಳನ್ನು ಪರಿಚಯಿಸಿದೆ. ಇದೀಗ ಪಶುಸಂಗೋಪನಾ ಕ್ಷೇತ್ರದ ಉತ್ತೇಜನಕ್ಕಾಗಿ ಈಗ ಹೊಸದೊಂದು ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
ಯಾವ ಯೋಜನೆ?
ಪಶು ಸಂಗೋಪನಾ ಕ್ಷೇತ್ರದಲ್ಲಿ ಅಭಿವೃದ್ಧಿ , ಉತ್ತೇಜನ ನೀಡುವ ನಿಟ್ಟಿನಲ್ಲಿ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಮಾರ್ಗದರ್ಶನ ನೀಡುವ ಕೆಲಸಗಳನ್ನು ಕೈಗೊಳ್ಳುತ್ತಿದೆ. ಈ ಮೂಲಕ ರೈತರಿಗೆ ಮಾಹಿತಿ ತಲುಪಿಸುವ ಕಾರ್ಯ ಕೂಡ ಮಾಡಲಾಗುತಿತ್ತು. ಪಶು ಸಂಗೋಪನಾ ಸಮಸ್ಯೆ ಇದ್ದಲ್ಲಿ ಯಾವುದೇ ರೀತಿಯ ಮಾಹಿತಿ ಬೇಕಾದಲ್ಲಿ ಮತ್ತು ಪರಿಹಾರದ ಕಾರಣಕ್ಕೆ ಮನೆ ಬಾಗಿಲಿಗೆ ಪಶು ಸಖಿಯರ ಆಗಮನ ಆಗಲಿದೆ.
ಜಾರಿಯಲ್ಲಿತ್ತು
ಈ ಹಿಂದೆ ಈ ಯೋಜನೆ ಜಾರಿಯಲ್ಲಿದ್ದರೂ ಅಷ್ಟಾಗಿ ಪರಿಣಾಮ ಕಂಡಿಲ್ಲ. ಇದೀಗ ಇದ್ದ ಯೋಜನೆಗೆ ಮತ್ತೆ ಬೆಂಬಲ ನೀಡಲು ಸರ್ಕಾರ ಮುಂದಾಗಿದೆ. ಪಶು ಸಂಗೋಪನಾ ಇಲಾಖೆಯ ಮೂಲಕ ಗ್ರಾಮಂತರ ಪ್ರದೇಶದಲ್ಲಿ ಇದಕ್ಕೆ ಬೇಕಾದ ಸಿಬ್ಬಂದಿ ನೇಮಕ ಮಾಡಿ ಅವರ ಮೂಲಕ ಜಾನುವಾರು ರೋಗ ನಿರೋಧಕ ಲಸಿಕೆ, ಪ್ರಥಮ ಚಿಕಿತ್ಸೆ ಇತರ ಸೌಲಭ್ಯದ ಕುರಿತಾಗಿ ಮಾಹಿತಿ ನೀಡಿ, ರೈತರ ಮನೆ ಬಾಗಿಲಿಗೆ ತಲುಪಿಸುವ ಒಂದು ವ್ಯವಸ್ಥೆ ಇದರಲ್ಲಿ ಇದೆ.
ಕೃಷಿ ಚಟುವಟಿಕೆಗೆ ಉತ್ತೇಜನ
ಇದರ ಮೂಲಕ ರೈತರಿಗೆ ಪಶುಸಂಗೋಪನೆ ಮಾಡುವ ಕುರಿತಾಗಿ ಮಾಹಿತಿ ಕೂಡ ದೊರೆಯಲಿದ್ದು, ಪಶುಗಳ ಆರೈಕೆ, ಕ್ರಮ ಇತ್ಯಾದಿ ಸುಲಭವಾಗಬಹುದು.
ಯಾವ ರೀತಿ ಕಾರ್ಯ ನಿರ್ವಹಿಸುತ್ತೆ?
ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಶು ಸಖಿಯರನ್ನು ನೇಮಿಸಿ, ಈ ಮೂಲಕ ಆಶಾ ಕಾರ್ಯಕರ್ತರಂತೆ ಕೆಲಸ ಮಾಡಲಿದ್ದಾರೆ. ಈ ಪಶು ಸಖಿಯರು ಜಾನುವಾರುಗಳ ಔಷಧ , ಪಶು ಆರೈಕೆ, ಅಭಿವೃದ್ಧಿ ಕುರಿತಂತೆ ಮನೆಮನೆಗೆ ತೆರಳಿ ಮಾಹಿತಿ ನೀಡುತ್ತಾರೆ.
ಪಶುಗಳ ಅಭಿವೃದ್ಧಿ
ಪಶುಗಳಲ್ಲಿ ಖಾಯಿಲೆ ಕಂಡು ಬಂದರೆ ಇದಕ್ಕೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಪಶುಸಂಗೋಪನಾ ಇಲಾಖೆಗೆ ಮಾಹಿತಿ ನೀಡಲಿದ್ದಾರೆ. ಮೇವು ಕ್ರಮ, ಜಾನುವಾರದ ರೋಗ ಇನ್ನಿತರ ಮಹತ್ವದ ಮಾಹಿತಿಯನ್ನು ರೈತರೊಂದಿಗೆ ಚರ್ಚಿಸಲಿದ್ದಾರೆ.
