Home Uncategorized ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು?

ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು?

ಹಿಂದಿನ ಕಾಲದಲ್ಲಿ ಹೆಣ್ಣು ಮಗು ಅಂದಾಗ ತುಂಬಾ ಅಸಮಾನತೆ ತೋರುತ್ತಿದ್ದರು. ಬರೀ ಅಡುಗೆ ಕೆಲಸಕ್ಕೆ ಸೀಮಿತವಾಗಿದ್ದ ಹೆಣ್ಣು ಮಕ್ಕಳಿಗೆ ಶಿಕ್ಷಣ, ಉದ್ಯೋಗ ಇತ್ಯಾದಿ ಕನಸಿನ ಮಾತಾಗಿತ್ತು.ಆದರೆ ಈಗ ಹಾಗಲ್ಲ ಮಹಿಳೆಯರು ತಾವು ಪುರುಷರಂತೆ ಸಮಾನರು, ತಾವು ಕಡಿಮೆಯಿಲ್ಲ ಎಂಬುದನ್ನು ತೋರ್ಪಡಿಸಿದ್ದಾರೆ. ಸರ್ಕಾರ ಕೂಡ ಮಹಿಳೆಯರ ಅಭಿವೃದ್ಧಿಗಾಗಿ ಹಲವು ರೀತಿಯ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಮಹಿಳೆಯರು ಮತ್ತು ಹುಡುಗಿಯರ ಪರಿಸ್ಥಿತಿಗಳನ್ನು ಸುಧಾರಿಸಲು ಇನ್ನೂ ಹಲವು ರೀತಿಯ ಕಾರ್ಯಕ್ರಮ ಜಾರಿಗೆ ತಂದಿದೆ. ಅದರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಕೂಡ ಒಂದಾಗಿದೆ.

 

ಏನಿದು ಯೋಜನೆ?
ಕೇಂದ್ರ ಸರ್ಕಾರವು ಮಹಿಳೆಯರ ಅಭಿವೃದ್ಧಿ ಗಾಗಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದಿದೆ.‌ ಈ ಯೋಜನೆಯು ಹೆಣ್ಣು ಮಗುವಿನ ಭವಿಷ್ಯ ಹಾಗೂ ಅವರ ಹಿತ ದೃಷ್ಟಿಯಿಂದ ಜಾರಿಗೆ ತರಲಾಗಿದೆ. ಇದು ಸರ್ಕಾರಿ ಬೆಂಬಲಿತ ಸಣ್ಣ ಠೇವಣಿ ಯೋಜನೆಯಾಗಿದ್ದು, ಇದು ಹೆಣ್ಣುಮಕ್ಕಳ ಆರ್ಥಿಕ ಅಭಿವೃದ್ಧಿ ಮಾಡಲು ರೂಪಿಸುವ ಯೋಜನೆಯಾಗಿದೆ. ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನದ ಭಾಗವಾಗಿ ಇದನ್ನು ಆರಂಭ ಮಾಡಲಾಗಿದೆ.

ಇದರ ಪ್ರಯೋಜನ ಏನು?
ಈ ಯೋಜನೆಯಡಿ ಹೆಣ್ಣು ಮಗುವಿಗೆ ಖಾತೆಯನ್ನು ತೆರೆಯಬಹುದಾಗಿದ್ದು, ಹೂಡಿಕೆ ಮಾಡಿದ ಮೊತ್ತವನ್ನು ಅವಳ ಉನ್ನತ ಶಿಕ್ಷಣ ಅಥವಾ ಮದುವೆಗೆ ಬಳಸಹುದು. ಹೆಣ್ಣು ಮಗುವಿನ ಜನನದ ನಂತರ ಆಕೆಗೆ 10 ವರ್ಷ ತುಂಬುವವರೆಗೆ ಯಾವುದೇ ಸಮಯದಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು. ಸುಕನ್ಯಾ ಸಮೃದ್ಧಿ ಖಾತೆಗೆ ಕನಿಷ್ಠ 250 ರೂ. ಠೇವಣಿ ಇಡಬೇಕಾಗುತ್ತದೆ. ನಂತರದ ವರ್ಷಗಳಲ್ಲಿ, ಕನಿಷ್ಠ 250 ರೂ. ಮತ್ತು ಗರಿಷ್ಠ 1.5 ಲಕ್ಷ ರೂ. ಠೇವಣಿ ಇಡಬಹುದು. ಖಾತೆಯನ್ನು ಸಕ್ರಿಯವಾಗಿರಿಸಲು, ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ 250 ರೂಪಾಯಿಗಳ ಡೆಪಾಸಿಟ್ ಕಡ್ಡಾಯವಾಗಿದೆ.

ಈ ಲಾಭ ಇರಲಿದೆ?
ಕಳೆದ ವರ್ಷ, ಈ ಯೋಜನೆಯ ಬಡ್ಡಿದರವು ಶೇಕಡಾ 7.6 ರಷ್ಟಿತ್ತು, ಆದರೆ ನಂತರ ಸರ್ಕಾರವು ಅದನ್ನು ಶೇಕಡಾ 8.2 ಕ್ಕೆ ಹೆಚ್ಚು ಮಾಡಿದೆ.

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತೆರಿಗೆ ವಿನಾಯಿತಿ ಇರಲಿದ್ದು, 80ಸಿ ಪ್ರಯೋಜನಕ್ಕೆ ಅರ್ಹತೆ ಪಡೆಯುತ್ತದೆ.

ಖಾತೆ ಇರುವ ಹೆಣ್ಣು ಮಗು ನಗರವನ್ನು ಹೊರತುಪಡಿಸಿ ಬೇರೆ ಸ್ಥಳಕ್ಕೆ ವರ್ಗಾವಣೆಗೊಂಡರೆ ಭಾರತದಲ್ಲಿ ಎಲ್ಲಿಯಾದರೂ ಖಾತೆಯನ್ನು ವರ್ಗಾಯಿಸಬಹುದು.

 
Previous articleಕೇಂದ್ರ ಸರ್ಕಾರದ ಉಜ್ವಲ ಯೋಜನೆ ಮೂಲಕ ಗ್ಯಾಸ್ ಸಿಲಿಂಡರ್ ಪಡೆಯಲು ಹೀಗೆ ಮಾಡಿ
Next articleಈ ಮಹಿಳೆಯರಿಗೆ ಅರ್ಜಿ ಹಾಕಿದರೂ ಗೃಹಲಕ್ಷ್ಮಿ ಹಣ ಖಂಡಿತಾ ಬರಲ್ಲ, ಕಾರಣ ಏನು?