
ಅಹಮದಾಬಾದ್: ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಾಕ್ ಮತ್ತು ಇಂಡಿಯಾ ನಡುವಿನ ಸೆಣಸಾಟದಲ್ಲಿ ಈ ಬಾರಿಯೂ ಕೂಡ ಭಾರತ ಗೆಲುವನ್ನು ಸಾಧಿಸಿದೆ. ಸತತವಾಗಿ ೮ನೇ ಬಾರಿಯೂ ಕೂಡ ಇಂಡಿಯಾ ಗೆಲುವಿನ ನಗೆ ಬೀರಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಟೀಮ್ ಇಂಡಿಯಾ ಬೌಲಿಂಗ್‌ನಲ್ಲಿ ಭರ್ಜರಿಯಾಗಿ ದಾಳಿ ಮಾಡುವ ಮೂಲಕ 192ರನ್ ಗಳ ಅಲ್ಪ ಮೊತ್ತಕ್ಕೆ ಪಾಕಿಸ್ತಾನವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ನಂತರ ಬ್ಯಾಟಿಂಗ್ ನಲ್ಲಿ 30.3ಓವರ್‌ಗಳಲ್ಲಿ ಗೆಲುವನ್ನು ಸಾಧಿಸಿತು. ಆ ಮೂಲಕ ಸತತವಾಗಿ 8ನೇ ಬಾರಿಯೂ ಕೂಡ ಪಾಕಿಸ್ತಾನಕ್ಕೆ ಸೋಲುಣಿಸಿದೆ.
ಟೀಂ ಇಂಡಿಯಾದಲ್ಲಿ ಪಾಕಿಸ್ತಾನದ ಎದುರಿನ ಮ್ಯಾಚ್‌ನಲ್ಲೂ ಕೂಡ ಭರ್ಜರಿ ಪ್ರದರ್ಶನ ನೀಡಿದ್ದು, 63ಎಸೆತಗಳಲ್ಲಿ 83ರನ್‌ಗಳನ್ನು ಗಳಿಸಿ ಔಟ್ ಆದರು. ಬಳಿಕ ಆಡಿದ ಶುಭ್‌ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ತಲಾ 16ರನ್ ಗಳಿಸಿ ಔಟ್ ಆದರೂ. ನಂತರ ಕಣಕ್ಕಿಳಿದ ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್.ರಾಹುಲ್ ಅವರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
