Home Uncategorized ಸ್ವಾಮಿ ಕೊಲೆ ಪ್ರಕರಣ: ನನ್ನಿಂದ ತಪ್ಪಾಗಿಹೋಯ್ತು ಎಂದು ಪಶ್ಚತ್ತಾಪ ಪಟ್ರಾ ನಟ ದರ್ಶನ್…!?

ಸ್ವಾಮಿ ಕೊಲೆ ಪ್ರಕರಣ: ನನ್ನಿಂದ ತಪ್ಪಾಗಿಹೋಯ್ತು ಎಂದು ಪಶ್ಚತ್ತಾಪ ಪಟ್ರಾ ನಟ ದರ್ಶನ್…!?

0
ಸ್ವಾಮಿ ಕೊಲೆ ಪ್ರಕರಣ: ನನ್ನಿಂದ ತಪ್ಪಾಗಿಹೋಯ್ತು ಎಂದು ಪಶ್ಚತ್ತಾಪ ಪಟ್ರಾ ನಟ ದರ್ಶನ್…!?

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನೇನು ಮಾಡಿಲ್ಲ, ನನಗೇನು ಗೊತ್ತಿಲ್ಲ ಎನ್ನುತ್ತಿದ್ದ ನಟ ದರ್ಶನ್‌ ಪೊಲೀಸರು ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಪ್ರಶ್ನಿಸಿದಾಗ ನನ್ನಿಂದ ತಪ್ಪಾಗಿಹೋಗಿದೆ ಎಂದು ಪಶ್ಚತ್ತಾಪ ಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಕೊಲೆ ಆರೋಪದ ಮೇಲೆ ಪೊಲೀಸ್‌ ಕಸ್ಟಡಿಯಲ್ಲಿರುವ ನಟ ದರ್ಶನ್‌ ಪಶ್ಚತ್ತಾಪದ ನುಡಿಗಳನ್ನಾಡಿದ್ದಾರೆ ಎನ್ನಲಾಗಿದೆ. ನನ್ನೊಂದಿಗೆ ನನ್ನ ಸಹಚರರ ಜೀವನವನ್ನೂ ಕೂಡ ಹಾಳುಮಾಡಿದೆ. ಒಬ್ಬ ನಟನಾಗಿ ಉತ್ತಮ ಸ್ಥಾನದಲ್ಲಿದ್ದುಕೊಂಡು ಇಂತಹ ಕೇಸ್‌ನಲ್ಲಿ ಅರೆಸ್ಟ್‌ ಆಗಿರುವುದಕ್ಕೆ ಪಶ್ಚತ್ತಾಪ ಪಡುತ್ತಿದ್ದಾರೆ ಎನ್ನಲಾಗಿದೆ.  ಅಲ್ಲದೇ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರನ್ನು ಹೇಗೆ ಫೇಸ್‌ ಮಾಡೋದು ಎನ್ನುವ ಟೆನ್ಷನ್‌ನಲ್ಲಿ ದರ್ಶನ್‌ ಇದ್ದಾರೆ ಎಂದು ಹೇಳಲಾಗಿದೆ.

ನಟ ದರ್ಶನ್‌ ತನ್ನ ಗೆಳತಿ ಪವಿತ್ರಾ ಗೌಡ ಕೆಟ್ಟದ್ದಾಗಿ ಸಂದೇಶ ಕಳುಹಿಸಿದ್ದ ಎನ್ನುವ ಕಾರಣಕ್ಕೆ ಆತನನ್ನು ಕಿಡ್ನಾಪ್‌ ಮಾಡಿ ಬೆಂಗಳೂರಿಗೆ ತಂದು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿ ಒಟ್ಟು 17 ಮಂದಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಪ್ರಕರಣದ ತನಿಖೆ ಬಹಳ ಚುರುಕುಗೊಂಡಿದ್ದು, ವಿಚಾರಣೆ ನಡೆಸುತ್ತಾ ಹೋದಷ್ಟು ಸ್ಫೋಟಕ ಮಾಹಿತಿ ಲಭ್ಯವಾಗುತ್ತಿದೆ ಎನ್ನಲಾಗಿದೆ.

 

LEAVE A REPLY

Please enter your comment!
Please enter your name here