Home ಆರೋಗ್ಯ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಗ್ರೀನ್ ಟೀ ಮತ್ತು ಟೊಮೆಟೋ ಜ್ಯೂಸ್ ರಾಮಬಾಣ

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಗ್ರೀನ್ ಟೀ ಮತ್ತು ಟೊಮೆಟೋ ಜ್ಯೂಸ್ ರಾಮಬಾಣ

0
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಗ್ರೀನ್ ಟೀ ಮತ್ತು ಟೊಮೆಟೋ ಜ್ಯೂಸ್ ರಾಮಬಾಣ

ಇಂದಿನ ಆಧುನಿಕ ದಿನಮಾನದಲ್ಲಿ ದೇಹಕ್ಕೆ ಸರಿಯಾಗಿ ವ್ಯಾಯಾಮ ಸಿಗದೇ ದೇಹದಲ್ಲಿ ಅನವಶ್ಯಕ ಬೊಜ್ಜುಗಳು ಹೆಚ್ಚಾಗುತ್ತದೆ. ಅಲ್ಲದೇ ನಾವು ಸೇವಿಸುವ ಆಹಾರಕ್ರಮದಲ್ಲಿಯೂ ಕೂಡ ಸರಿಯಾದ ಕ್ರಮವನ್ನು ಉಪಯೋಗಿಸದೇ ಇದ್ದಾಗ ಅಥವಾ ಕೊಲೆಸ್ಟ್ರಾಲ್ ಯುಕ್ತ ಆಹಾರವನ್ನು ಸೇವಿಸಿದಾಗ ಕೊಲೆಸ್ಟ್ರಾಲ್ ಸಮಸ್ಯೆ ನಮ್ಮನ್ನ ಆವರಿಸಿಕೊಳ್ಳುತ್ತದೆ. ಈ ಕೊಲೆಸ್ಟ್ರಾಲ್ ಎನ್ನುವುದು ನಮ್ಮ ಆರೋಗ್ಯ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಕೊಲೆಸ್ಟ್ರಾಲ್ ಎನ್ನುವುದು ನಮ್ಮನ್ನು ಆವರಿಸಿಕೊಳ್ಳದೇ ಇರುವ ರೀತಿಯಲ್ಲಿ ನಮ್ಮನ್ನ ನವು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಒಂದು ವೇಳೆ ಬಂದಿತೆಂದಾದರೆ ಅದನ್ನು ಹೇಗೆ ನಿಯಂತ್ರಣದಲ್ಲಿಡಬೇಕು ಎನ್ನುವುದನ್ನು ತಿಳಿದುಕೊಂಡು ಅದೇ ಪ್ರಕಾರವಾಗಿ ಆಹಾರವನ್ನು ಸೇವಿಸಬೇಕು.

ಹೌದು, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬಾರದಿದ್ದರೆ ಹೃದಯಾಘಾತ, ಬಿಪಿ ಮುಂತಾದ ಸಮಸ್ಯೆಗಳು ಎದುರಾಗಬಹುದು. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ಈ ರೀತಿಯ ಸಮಸ್ಯೆ ಉಂಟಾಗುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಮನೆಮದ್ದುಗಳ ಮೂಲಕ ಅದನ್ನು ನಿಯಂತ್ರಿಸಬಹುದು. ಅವುಗಳಲ್ಲಿ ಬಹಳ ಮುಖ್ಯವಾದುದು ಟೊಮೆಟೊ ಕೂಡ ಒಂದು. ಹೌದು, ಟೊಮೆಟೊದಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ಸಹ ನಿಯಂತ್ರಿಸಬಹುದು ಎನ್ನಲಾಗುತ್ತದೆ. ಟೊಮೆಟೋವನ್ನು ಜ್ಯೂಸ್ ಮಾಡಿ ಸೇವಿಸುವುದರಿಂದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು.
ಟೊಮೆಟೊ ಜ್ಯೂಸ್ ಸೇವನೆ ಮೂಲಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣಕ್ಕೆ ತರಬಹುದು ಎನ್ನಲಾಗಿದೆ. ಇನ್ನು, ಗ್ರೀನ್ ಟೀ, ಇದನ್ನು ಸಾಮಾನ್ಯವಾಗಿ ಇತ್ತೀಚಿನ ದಿನಮಾನದ ಎಲ್ಲರೂ ಕೂಡ ಸೇವಿಸುತ್ತಾರೆ. ಇದು ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ಕೊಲೆಸ್ಟ್ರಾಲ್ ಅನ್ನು ಕೂಡ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

 

LEAVE A REPLY

Please enter your comment!
Please enter your name here