
ಮನೆಯಲ್ಲಿ ದನ ಇದ್ದರೆ ದನ ಹಾಲನ್ನು ಕುಡಿಯುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ದನ ಸಾಕುವವರು ಕಡಿಮೆ. ಹೀಗಾಗಿ ಅವರು ಅಂಗಡಿ ಹಾಲಿನ ಮೊರೆಹೋಗುತ್ತರೆ. ಕೆಲವರಿಗೆ ದಿನನಿತ್ಯ ಅಂಗಡಿ ಹಾಲನ್ನು ತಂದು ಪೂರೈಸುವುದು ಕಷ್ಟವಾಗುವ ಹಿನ್ನೆಲೆ ಒಮ್ಮೆ ಹಾಲಿನ ಪುಡಿಯ ಪೌಡರ್ ತಂದಿಟ್ಟು ಕೊಟ್ಟು ಅದನ್ನೇ ಉಪಯೋಗಿಸಿ ಚಹಾ, ಕಾಪಿ ಮುಂತಾದವುಗಳನ್ನು ಮಾಡಿ ಕುಡಿಯುತ್ತಾರೆ. ಆದರೆ ಇದು ಆರೋಗ್ಯಕ್ಕೆ ಎಷ್ಟರ ಮಟ್ಟಿಗೆ ಒಳ್ಳೆಯದು ಎನ್ನುವ ಅಂಶವನ್ನು ತಿಳಿದುಕೊಳ್ಳಲು ಯಾರೂ ಕೂಡ ಮುಂದೆ ಹೋಗುವುದಿಲ್ಲ. ಈ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ನೀಡ್ತಿವಿ ಮುಂದೆ ಓದಿ…
ಕೆಲವರು ಅಭ್ಯಾಸ ಬಲದಿಂದಲೂ ಹಾಲಿನ ಪುಡಿಯ ಚಹಾ/ಕಾಫಿ ಸೇವಿಸುತ್ತಾರೆ. ಅದೇ ಡೇಂಜರ್! ಅಂತಹವರಿಗೆ ಸದಾ ಹಾಲಿನ ಪುಡಿಯ ಚಹಾ/ಕಾಫಿ ಸೇವನೆಯಿಂದ ಎದುರಾಗುವ ಅಪಾಯಗಳ ಬಗ್ಗೆ ಅರಿವು ಇರುವುದಿಲ್ಲ. ಆರೋಗ್ಯ ತಜ್ಞರ ಪ್ರಕಾರ ಹಾಲಿನ ಪುಡಿ ನಿಮ್ಮ ದೇಹದ ತೂಕವನ್ನು ಹೆಚ್ಚಿಸುವುದರ ಜೊತೆಗೆ ನೇರವಾಗಿ ಹೃದಯಕ್ಕೂ ಅಪಾಯ ತಂದೊಡ್ಡಬಲ್ಲದು.
ಹಾಲಿನ ಪುಡಿಯಲ್ಲಿ ಶೇ. 88 ಭಾಗ ನೀರು, ಶೇ. 4 ಭಾಗ ಹಾಲಿನ ಕೊಬ್ಬು ಮತ್ತು ಶೇ. 8 ರಷ್ಟು ಪ್ರೋಟಿನ್ ಇರುತ್ತದೆ. ಆದರೆ ಇಲ್ಲಿ ಹಾಲಿನಿಂದಲೇ ಹಾಲಿನ ಪುಡಿಯನ್ನು ತಯಾರಿಸುವಾಗ ಹಾಲನ್ನು ಆವಿ ಮಾಡುತ್ತಾರೆ. ಇದರಿಂದ ಹಾಲಿನ ಪುಡಿ ಕೆನೆಗಟ್ಟುತ್ತಾ ಗಟ್ಟಿಯಾಗ ತೊಡಗುತ್ತದೆ. ಇದಕ್ಕೆ ಒಂದಷ್ಟು ರಾಸಾಯನಿಕಗಳನ್ನು ಮಿಶ್ರಣ ಮಾಡಿ, ಹಾಲಿನ ಪುಡಿಯನ್ನು ತಯಾರಿಸುತ್ತಾರೆ.
ಈ ಹಾಲಿನ ಪುಡಿಯಲ್ಲಿ ಕೊಲೆಸ್ಟ್ರಾಲ್ ಅಧಿಕವಾಗಿರುವುದರಿಂದ ಇದು ಆರೋಗ್ಯಕ್ಕೆ ಒಳ್ಳಯದಲ್ಲ. ಅದು ಆರೋಗ್ಯಕ್ಕೆ ಆಘಾತವನ್ನು ತರುವುದು ನಿಶ್ಚಿತ. ಇದು ಹೃದಯಕ್ಕೆ ಬಾಧಕವಾಗಿರುತ್ತದೆ. ಇದು ರಕ್ತ ಪರಿಚಲನೆಗೆ ಬಾಧಕ ತಂದೊಡ್ಡುತ್ತದೆ. ರಕ್ತ ಪರಿಚಲನೆಗೆ ಅಡ್ಡವಾಗುತ್ತದೆ. ಮಧು ಮೇಹ ಬಾಧಿತರಿಗಂತೂ ಹಾಲಿನ ಪುಡಿ ಸೇವನೆ ದೊಡ್ಡ ಪ್ರಮಾದವೇ ಸರಿ. ಏಕೆಂದರೆ ಹಾಲಿನ ಪುಡಿಯಲ್ಲಿ ಸಕ್ಕರೆ ಅಂಶ ಅಧಿಕವಾಗಿಯೇ ಇರುತ್ತದೆ.
