Home ಆರೋಗ್ಯ ಮೆಂತೆ ಚಹಾ ಸೇವನೆಯಿಂದ ಆರೋಗ್ಯಕ್ಕೆ ಅದ್ಭುತ ಲಾಭಗಳು ಸಿಗುತ್ತವೆ..

ಮೆಂತೆ ಚಹಾ ಸೇವನೆಯಿಂದ ಆರೋಗ್ಯಕ್ಕೆ ಅದ್ಭುತ ಲಾಭಗಳು ಸಿಗುತ್ತವೆ..

0
ಮೆಂತೆ ಚಹಾ ಸೇವನೆಯಿಂದ ಆರೋಗ್ಯಕ್ಕೆ ಅದ್ಭುತ ಲಾಭಗಳು ಸಿಗುತ್ತವೆ..

ಕೆಲವರಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹ ಸೇವಿಸುವುದೆಂದರೆ ಬಹಳ ಇಷ್ಟ. ಬೆಳಿಗ್ಗೆ ಖಾಲಿ ಹೊಟ್ಟೆಗೆ ಆರಂಭವಾದ ಚಹಾ ಸಂಜೆಯ ತನಕ ಅದೆಷ್ಟು ಭಾರಿ ಕುಡಿಯುತ್ತಾರೆ ಎನ್ನುವುದು ಅವರಿಗೆ ತಿಳಿದಿರುವುದಲ್ಲ. ಈ ರೀತಿ ಚಹಾ ಕುಡಿಯುವುದು ಆರೋಗ್ಯ ಒಳ್ಳೆಯದಲ್ಲ. ಈ ರೀತಿ ಚಹಾ ಕುಡಿಯುವ ಅಭ್ಯಾಸ ಇರುವವರು ಮೆಂತೆ ಚಹಾವನ್ನು ಕುಡಿಯಿರಿ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು.

ಮೆಂತೆಯಲ್ಲಿ ಅಂಟಾಸಿಡ್ ಗಳಿದ್ದು, ಇವು ಶರೀರದಲ್ಲಿ ಆಸಿಡ್ ರಿಫ್ಲೆಕ್ಷ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಇದಲ್ಲದೆ ಹೊಟ್ಟೆಯ ಅಲ್ಸರ್ ಸಮಸ್ಯೆಯಿಂದ ಕೂಡ ಮುಕ್ತಿ ಸಿಗುತ್ತದೆ. ಇದಲ್ಲದೆ ಮೆಂತೆ ಚಹಾ ಸೇವನೆಯಿಂದಾಗುವ ಇತರ ಲಾಭಗಳ ಕುರಿತು ತಿಳಿದುಕೊಳ್ಳೋಣ ಬನ್ನಿ….

ತೂಕ ಇಳಿಕೆಗೆ ನೆರವಾಗುತ್ತದೆ. ಮೆಂತೆಯಲ್ಲಿ ನಾರಿನಂಶ ಹೇರಳ ಪ್ರಮಾಣದಲ್ಲಿದ್ದು, ಇದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಇದಲ್ಲದೇ ಮೆಂತೆ ಚಹಾ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ದೂರವಾಗುತ್ತದೆ. ತೂಕ ಇಳಿಕೆ ಹಾಗೂ ಮಧುಮೇಹದ ಅಪಾಯವನ್ನು ಕಡಿಮೆ ಮಾಡುವ ಸಾಂಬಾರು ಪದಾರ್ಥಗಳಲ್ಲಿ ಮೆಂತೆ ಕೂಡ ಒಂದು. ಆರೋಗ್ಯಕರ ಜೀವನ ಮತ್ತು ಸದೃಢ ಶರೀರಕ್ಕಾಗಿ ಇಂದಿನಿಂದಲೇ ನಿಮ್ಮ ನಿತ್ಯದ ಆಹಾರ ಕ್ರಮಗಳಲ್ಲಿ ಮೆಂತೆ ಚಹಾವನ್ನು ಸೇರಿಸಿ.

ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ

ಮೆಂತೆ ಬೀಜಗಳು ಹಲವು ರೀತಿಯ ಪೋಷಕಾಂಶಗಳನ್ನು ಹೊಂದಿರುತ್ತವೆ. ಇದು ದೇಹದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಕೂಡ ಸಹಾಯಕವಾಗಿದೆ. ಇದು ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗುವುದನ್ನು ತಡೆಯುತ್ತದೆ.

ಹಾಗಾದ್ರೆ ಈ ಮೆಂತೆ ಚಹಾವನ್ನು ತಯಾರಿಸುವುದು ಹೇಗೆ ಅನ್ನುವ ಪ್ರಶ್ನೆ ನಿಮ್ಮನ್ನ ಕಾಡ್ತಿದ್ರೆ ಇಲ್ಲಿದೆ ಹೆಚ್ಚಿನ ಮಾಹಿತಿ…
ಮೆಂತೆ ಚಹಾ ತಯಾರಿಸಲು ಮೊದಲು ಒಂದು ಚಮಚ ಮೆಂತೆ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಬಿಸಿನೀರು ಬೆರೆಸಿ. ಇದಾದ ಬಳಿಕ ಅದನ್ನು ಸೋಸಿಕೊಳ್ಳಿ ಮತ್ತು ಅದಕ್ಕೆ ನಿಂಬೆ ರಸವನ್ನು ಬೆರೆಸಿ. ನೀವು ಬೇಕಾದರೆ ರಾತ್ರಿ ಇಡೀ ಮೆಂತೆ ಕಾಳುಗಳನ್ನು ನೀರಿನಲ್ಲಿ ನೆನೆಯಿಟ್ಟು, ಬೆಳಗ್ಗೆ ಆ ನೀರಿನಲ್ಲಿ ತುಳಸಿ ಎಲೆಗಳನ್ನು ಹಾಕಿ ಕುದಿಸಿಕೊಳ್ಳಬಹುದು. ಈಗ ಸೋಸಿದ ಚಹಾದಲ್ಲಿ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಸೇವಿಸಬಹುದು.

 

LEAVE A REPLY

Please enter your comment!
Please enter your name here