Home ಆರೋಗ್ಯ ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕೆ?ಈ ಕ್ರಮ ಅನುಸರಿಸಿ

ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕೆ?ಈ ಕ್ರಮ ಅನುಸರಿಸಿ

0
ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕೆ?ಈ ಕ್ರಮ ಅನುಸರಿಸಿ

ಚಳಿಗಾಲದ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚು ಕಾಡುತ್ತ ಇರುತ್ತದೆ. ಅದರಲ್ಲೂ ಶೀತ, ಕೆಮ್ಮು ನೆಗಡಿ ಜ್ವರ ದೇಹದಲ್ಲಿ ಹಾರ್ಮೋನ್ ಗಳ ವ್ಯತ್ಯಾಸ ಇತ್ಯಾದಿ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತವೆ. ಇದಕ್ಕಾಗಿ ಎಲ್ಲ ಸಮಸ್ಯೆಗಳಿಂದ ದೂರವುಳಿಯಲು ಕೆಲವೊಂದು ಬದಲಾವಣೆ ಮಾಡಬೇಕು. ನಮ್ಮ ಆಹಾರ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆ, ಅಷ್ಟು ಮಾತ್ರವಲ್ಲದೆ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿಕೊಳ್ಳಬೇಕು.

ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು

ನಮ್ಮ ದೇಹದ ಸಾಮರ್ಥ್ಯ ಸರಿದೂಗಿಸಿಕೊಳ್ಳಲು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು ಇದಕ್ಕೆ ಪ್ರಮುಖವಾಗಿ ನಮ್ಮ ದೇಹ ಉಷ್ಣಾಂಶವನ್ನು ಕಾಯ್ದುಕೊಳ್ಳಬೇಕು.

ಈ ಆಹಾರ ಕ್ರಮ ಅನುಸರಿಸಿ

ಚಳಿಗಾಲದ ಸಂದರ್ಭದಲ್ಲಿ ನಿಮ್ಮ ಆರೋಗ್ಯಕ್ಕೆ ಸರಿಯಾದ ಆಹಾರ ಕ್ರಮ ಬೇಕು. ಒಳ್ಳೆಯ ಪೌಷ್ಠಿಕ ಸತ್ವಗಳು ಮತ್ತು ವಿಟಮಿನ್ ಅಂಶಗಳನ್ನು ಪಡೆಯಲು ನೀವು ನೆಲ್ಲಿಕಾಯಿ ಸೇವನೆ ಮಾಡಬೇಕು. ಇದರಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿರುತ್ತದೆ.

ಚಳಿಗಾಲದಲ್ಲಿ ಬೆಲ್ಲ ಸೇವನೆ ಮಾಡುವುದು ಸಹ ಉತ್ತಮ ಬೆಲ್ಲವನ್ನು ಸಕ್ಕರೆಯ ಬದಲಾಗಿ ನೀವು ಬಳಸಬಹುದು. ಬೆಲ್ಲದಲ್ಲಿ ಅಪಾರ ಪ್ರಮಾಣದ ಪೌಷ್ಟಿಕಾಂಶಗಳು ನಿಮ್ಮ ಆರೋಗ್ಯಕ್ಕೆ ದೊರೆಯುತ್ತದೆ.

ನಿಮ್ಮ ಆಹಾರದಲ್ಲಿ ರಾಗಿ, ಜೋಳದಂತಹ ಧಾನ್ಯಗಳನ್ನು ಸೇರಿಸಿ. ಅವು ಆರೋಗ್ಯಕ್ಕೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ನೀಡುತ್ತದೆ.

ಚಳಿಗಾಲದಲ್ಲಿ ಬಹಳಷ್ಟು ನೀರು ಕುಡಿಯುದು ಸಹ ಉತ್ತಮ. ಕಫ, ವಾತ ಮತ್ತು ಪಿತ್ತವನ್ನು ಸಮತೋಲನಗೊಳಿಸಲು ಬೆಳಿಗ್ಗೆ ತಾಮ್ರದ ಪಾತ್ರೆಯಲ್ಲಿನ ಇಟ್ಟ ನೀರನ್ನು ಕುಡಿದರೆ ಉತ್ತಮ.

ನಿಮ್ಮ ಆಹಾರ ಕ್ರಮದಲ್ಲಿ ಕ್ಯಾರೆಟ್, ಸಿಹಿ ಗೆಣಸು ಮುಂತಾದ ಹಸಿರು ತರಕಾರಿಗಳನ್ನು ಸೇರಿಸಿ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ

ಪೋಷಕಾಂಶಗಳ ಜೊತೆಗೆ, ಫೈಬರ್ ಮತ್ತು ನೀರಿನಲ್ಲಿ ನೆನೆಸಿಟ್ಟ ಆಹಾರವನ್ನು ಪ್ರತಿದಿನ ಸೇವಿಸುವುದರಿಂದ ದೇಹದ ಸಮತೋಲನದ ಜೊತೆಗೆ ದೈಹಿಕ ಚಟುವಟಿಕೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ

ಅದೇ ರೀತಿ ದಿನನಿತ್ಯ ವಾಕಿಂಗ್ ಮಾಡುವುದರಿಂದ ಶೀತ ವಾತಾವರಣದಲ್ಲಿ ಶ್ವಾಸಕೋಶದ ಸಾಮರ್ಥ್ಯ ಸುಧಾರಿಸುತ್ತದೆ. ಜೊತೆಗೆ ಉಸಿರಾಟದ ಸ್ನಾಯುಗಳನ್ನು ವೃದ್ಧಿಸುತ್ತದೆ.

ಆಹಾರಗಳಾದ ಆಮ್ಲ, ತುಪ್ಪ, ಖರ್ಜೂರ, ಸಾಸಿವೆ ಎಣ್ಣೆ, ಬ್ರೊಕೋಲಿ ಇಂಥ ಆಹಾರಗಳನ್ನು ಸೇವಿಸುವುದರಿಂದ ಚಳಿಗಾಲದಲ್ಲಿ ಕಾಯಿಲೆಗಳನ್ನು ಕಡಿಮೆ ಮಾಡಬಹುದು.

 

LEAVE A REPLY

Please enter your comment!
Please enter your name here